ಉಜಿರೆ: ಗುರಿಪಳ್ಳ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರ ಸಭೆ ಇತ್ತೀಚೆಗೆ ನಡೆಯಿತು.
ಶಾಲೆಗೆ ಪೀಠೋಕರಣ ಮತ್ತು ಇತರ ಕೊಡುಗೆ ನೀಡಿದವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಗೆ ಕೊಡುಗೈ ದಾನಿ ಹಳೆ ವಿದ್ಯಾರ್ಥಿಪುಣೆಯಲ್ಲಿ ಸ್ವಉದ್ಯೋಗಿ ಸುಬ್ರಹ್ಮಣ್ಯ ಭಟ್, ಕೃಷಿಕ ರಮಾನಂದ ಶರ್ಮ, ಗ್ರಾಮ ಪಂಚಾಯತ್ ಸದಸ್ಯ ಸಚಿನ್, ಶಿಕ್ಷಣ ತಜ್ಞ ಪಟವರ್ಧನ್, ಇಂಡಿಯನ್ ಬ್ಯಾಂಕ್ ನಿವೃತ್ತ ಅಧಿಕಾರಿ ಸಾವಿತ್ರಿ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಕಿರಣ್ ಮರಾಠ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸವಿತಾ, ಮುಖ್ಯ ಶಿಕ್ಷಕಿ ಮಂಜುಳಾ ಜೆ. ಟಿ., ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಶರಧ ಅಠವಳೆ, ಕೃಷಿಕ ಯೋಗೀಶ್ ಭಟ್ ಬೆಳ್ತಂಗಡಿ, ಲಲಿತಾ ಸುಬ್ರಹ್ಮಣ್ಯ ಭಟ್ ಪುಣೆ, ಭಾರತಿ ಪುಸ್ತಕ ಭಂಡಾರದ ರೇಖಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಹಾಜರಿದ್ದರು.
ಮುಖ್ಯ ಶಿಕ್ಷಕಿ ಮಂಜುಳಾ ಜೆ. ಟಿ. ಸ್ವಾಗತಿಸಿದರು. ಗೌರವ ಶಿಕ್ಷಕಿ ಅಂಜಲಿ ನಿರೂಪಿಸಿ ಅತಿಥಿ ಶಿಕ್ಷಕಿ ಅನಿತಾ ವಂದಿಸಿದರು.
p>