ಮಾಲಾಡಿ ಗ್ರಾಮದ ಕುರಿಯೋಡಿ ನಿವಾಸಿ ಜೋನ್ ಗೊನ್ಸಾಲ್ವಿಸ್ (80 ವ) ಇಂದು (ಫೆ. 22) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪ್ರಗತಿಪರ ಕೃಷಿಕರಾಗಿದ್ದು, ವಾರ್ಡ್ ಗುರಿಕಾರರಾಗಿ, ಎಲ್ಲಾ ಕ್ಷೇತ್ರಗಳಲ್ಲೂ ಅನುಭವ ಹೊಂದಿರುವ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಲಾಡಿ -ಸೋಣಂದೂರು ವಲಯದ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಮೃತರ ಹಿರಿಯ ಪುತ್ರ ಜೆಸ್ವಿಟ್ ಸಭೆಯ ಧರ್ಮಗುರುಗಳಾಗಿದ್ದು, ಹಿರಿಯ ಪುತ್ರಿ ಅರ್ಸುಲೈನ್ ಧರ್ಮಭಗಿನಿಯಾಗಿ ಆಫ್ರಿಕಾದ ತಾಂಝಾನಿಯಾದಲ್ಲಿದ್ದು ಇಬ್ಬರು ಪುತ್ರರು ಹಾಗೂ ನಾಲ್ಕು ಮಂದಿ ಪುತ್ರಿಯರನ್ನು ಅಗಲಿದ್ದಾರೆ.
p>