ಗೇರುಕಟ್ಟೆ ಉದ್ಭವ ಶ್ರೀ ಆದಿ ಲಿಂಗೇಶ್ವರ ದೇವಸ್ಥಾನಕ್ಕೆ ಅಕ್ರಮ ಪ್ರವೇಶ, ದೈವ ನಿಂದನೆ ಮಾಡಿದ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು- ರುಕ್ಮಯ್ಯ.ಎಂ: ಪತ್ರಿಕಾಗೋಷ್ಠಿ

0

ಗೇರುಕಟ್ಟೆ: ಕಳಿಯ ಗ್ರಾಮದ ಮುಡೈಪಲ್ಕೆ ಉದ್ಭವ ಶ್ರೀ ಆದಿ ಲಿಂಗೇಶ್ವರ ದೈವಸ್ಥಾನದಲ್ಲಿ ಕ್ಷೇತ್ರದಲ್ಲಿ ಡಿ.30ರಂದು ರಾತ್ರಿ ನಡೆದ ದೈವೋತ್ಸವದ ಸಂದರ್ಭದಲ್ಲಿ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿ ದೈವ ನಿಂದನೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳಬೇಕು ಎಂದು ದೈವಸ್ಥಾನದ ಅಧ್ಯಕ್ಷ ರುಕ್ಮಯ್ಯ ಎಂ.ಹೇಳಿದರು.ಅವರು ಫೆ.6 ರಂದು ದೈವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನನ್ನ ಮಗ ಚಿತ್ತರಂಜನ್.ಇವನು ತನ್ನ 14 ವರ್ಷ ಪ್ರಾಯದಲ್ಲಿ 9ನೇ ತರಗತಿಯಲ್ಲಿ ಬೆಳ್ತಂಗಡಿ ಚರ್ಚ್ ಶಾಲೆಯಲ್ಲಿ ಕಲಿಯುತ್ತಿದ್ದ ಕಾಲಾನುಗಟ್ಟದಲ್ಲಿ ದೈವಾ ಅಭಯವಾಗಿ ನುಡಿದಂತೆ ನಮ್ಮ ದನದ ಹಟ್ಟಿಯ ಎದುರುಗಡೆ ಶಿವಲಿಂಗವನ್ನು 2017 ಡಿಸೆಂಬರ್ 28 ರಂದು ಬೆಳಗ್ಗಿನ ಜಾವ ಉದ್ಭವಿಸಿದ ಪುಣ್ಯ ಕ್ಷೇತ್ರವಾಗಿದ್ದಿರುತ್ತದೆ.ಅಂದಿನಿಂದ ಇಲ್ಲಿಯವರೆಗೆ ದೈವಾದೇಶದಂತೆ ವರ್ಷದ ಪ್ರತಿ ತಿಂಗಳು ದಿನ ನಿತ್ಯ ಬೆಳಿಗ್ಗೆ, ಸಾಯಂಕಾಲ ದೇವರ ಹಾಗೂ ದೈವಗಳ ಪೂಜಾ ವಿಧಿ ವಿಧಾನಗಳು, ಸಂಕ್ರಾಂತಿಗೆ ವಿಶೇಷ ಪೂಜೆ ನಡೆಯುತ್ತಾ ಬರುತ್ತಿದೆ.ಈ ವರ್ಷ 2023 ಡಿಸೆಂಬರ್ 28, 29 ಮತ್ತು 30 ರಂದು 6ನೇ ವಾರ್ಷಿಕೋತ್ಸವದ ಸಂದರ್ಭ ಡಿ.30ರಂದು ರಾತ್ರಿ ನೆತ್ತರು ಗುಳಿಗ ದೈವಕ್ಕೆ ನೇಮ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 5 ಜನ (ನಮಗೆ ಹೆಸರು ಗೊತ್ತಿಲ್ಲದ) ವಿಪರೀತ ಮದ್ಯಪಾನ ಮಾಡಿಕೊಂಡು ಅಕ್ರಮವಾಗಿ ಪ್ರವೇಶ ಮಾಡಿ ಕ್ಷೇತ್ರದಲ್ಲಿ ದೈವ ನರ್ತನ ನಡೆಯುತ್ತಿದ್ದಾಗ ಏಕಾಏಕಿ ದೈವವನ್ನು ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೆ, ದೈವ ನರ್ತನ ಮಾಡುತ್ತಿದ್ದ ನನ್ನ ಮಗ ಚಿತ್ತರಂಜನ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ.ಮುಂದುವರಿದು ನಿಮ್ಮ ಜಾತಿಯವರಿಗೆ ದೈವ ಕಟ್ಟಲು ಯಾರು ಅನುಮತಿ ಕೊಟ್ಟಿದ್ದು, ನಿಮ್ಮ ಜಾತಿಯವರಿಗೆ ದೈವಕೋಲ ಕಟ್ಟಲು ಅವಕಾಶವಿಲ್ಲ.ಏನಿದ್ದರೂ ನಮ್ಮ ನಲಿಕೆ ಸಮುದಾಯದವರಿಗೆ ನೀವು ದುಡ್ಡು ಮಾಡುವ ಉದ್ದೇಶದಿಂದ ದೈವಾರಾಧನೆ ಮಾಡುತ್ತಿದ್ದೀರಿ ಎಂಬ ಸುಳ್ಳು ಆರೋಪವನ್ನು ಮಾಡಿರುವುದಲ್ಲದೆ, ನಮ್ಮ ಧಾರ್ಮಿಕ ನಂಬಿಕೆ, ಭಕ್ತಿ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿರುತ್ತಾರೆ.ನಮ್ಮ ದೈವದ ಅಪ್ಪಣೆಯ ಮೇರೆಗೆ ನಮ್ಮ ದೇವರ ಶ್ರೀ ಕ್ಷೇತ್ರದಲ್ಲಿರುವ ಈಶ್ವರ ಗುಳಿಗ ಹಾಗೂ ನೆತ್ತೆರ್ ಗುಳಿಗ ದೈವಗಳಿಗೆ ಮಾತ್ರ ಕೋಲ ಸತತ 6 ವರ್ಷಗಳಿಂದ ನನ್ನ ಮಗ ಚಿತ್ತರಂಜನ್ ಕಟ್ಟುತ್ತಾ ಬರುವುದಾಗಿದೆ.ಹೊರತು ಊರಿನ ಹೊರಗಡೆ ಹೋಗಿ ಎಲ್ಲಿಯೂ ಕೋಲ ಕಟ್ಟುವುದಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸದ ಈ ಮೇಲ್ಕಂಡ ಆರೋಪಿಗಳು ನಮ್ಮ ಧಾರ್ಮಿಕ ಭಾವನೆಗೆ ತೇಜೋವಧೆ ಮಾಡುವ ಉದ್ದೇಶದಿಂದಲೇ ದೈವ ನರ್ತನ ನಡೆಯುತ್ತಿದ್ದಾಗಲೇ ಅಸಭ್ಯ ವರ್ತನೆ ಮಾಡಿದ್ದಾರೆ.ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದು ಬಿಟ್ಟಿರುತ್ತಾರೆ.ಈ ರೀತಿ ಮಾಡಿದ ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಅಹಿತಕರ ಘಟನೆ ಮಾಡಿರುವ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದೈವಸ್ಥಾನದ ಟ್ರಸ್ಟಿ ರುಕ್ಮಯ್ಯರ ಪತ್ನಿ ರೇಖಾ, ಧರ್ಮದರ್ಶಿ ಚಿತ್ತರಂಜನ್, ದಲಿತ ಮುಖಂಡ ವೆಂಕಣ್ಣ ಕೊಯ್ಯೂರು, ಕಾನೂನು ಸಲಹೆಗಾರ ಉದಯ ಬಿ.ಕೆ.ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here