ಲಾಯಿಲ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.26ರಂದು 75ನೇ ಗಣರಾಜ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.
ಗಣ್ಯರನ್ನು ಶಾಲಾ ವಿದ್ಯಾರ್ಥಿಗಳ ಅದ್ದೂರಿ ಪಥಸಂಚನದ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು.ಪೂರ್ವಾಹ್ನ 9.30ಕ್ಕೆ ಸರಿಯಾಗಿ ಸುಪೀರಿಯರ್ ಸಿಸ್ಟರ್ ಅನಿಟಾ ಇವರು ಧ್ವಜಾರೋಹಣವನ್ನು ನೆರವೇರಿಸಿದರು.ರಾಷ್ಟ್ರಧ್ವಜಕ್ಕೆ ಗೌರವ ಸಂಕೇತವಾಗಿ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಲಾಯಿತು.
ನಂತರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೀತಿ ಜಾರ್ಜ್, ಸುಪೀರಿಯರ್ ಸಿಸ್ಟರ್ ಅನಿಟಾ, ಶಾಲಾ ಶಿಕ್ಷಕ-ರಕ್ಷಕ ಸಂಘದ ಸದಸ್ಯರುಗಳಾದ ಶುಭಲಕ್ಷ್ಮಿ ಹಾಗೂ ಹಬೀಬಾ ಹಾಗೂ ಶಿಕ್ಷಕ ಪ್ರತಿನಿಧಿ ಸಂಧ್ಯಾ ಇವರುಗಳ ಗಣ್ಯ ಉಪಸ್ಥಿತಿಯೊಂದಿಗೆ ಮಕ್ಕಳಿಂದ ವಿವಿಧ ಮನೋರಂಜನಾತ್ಮಕ ಕಾರ್ಯಕ್ರಮಗಳು ನಡೆದವು.
ಸಹ ಶಿಕ್ಷಕಿ ಮಧುರಾ ಇವರು ಪ್ರಜಾಪ್ರಭುತ್ವ ದಿನದ ಮಹತ್ವದ ಕುರಿತಾಗಿ ತಿಳಿಸಿದರು.ಅಂತೆಯೇ ಮಕ್ಕಳಿಂದ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಜಾಪ್ರಭುತ್ವ ದಿನದ ಕುರಿತಾದ ಭಾಷಣಗಳು ನಡೆದವು.ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯ ತರುವಾಯ ಅಂತಿಮವಾಗಿ ಈ ಸುಂದರ ಕಾರ್ಯಕ್ರಮವು ವಂದನಾರ್ಪಣೆಯೊಂದಿಗೆ ಸಂಪನ್ನಗೊಂಡಿತು.
ಈ ಕಾರ್ಯಕ್ರಮವನ್ನು ಶಾಲಾ ಸಹ ಶಿಕ್ಷಕಿ ಸ್ವಾತಿ ನಿರೂಪಿಸಿ, ನಮಿತಾ ರವರು ವಂದನಾರ್ಪಣೆಗೈದರು.ಕೊನೆಗೆ ಮಕ್ಕಳಿಗೆ ಸಿಹಿ ತಿಂಡಿಯ ವಿತರಣೆ ನಡೆಯಿತು.ಒಟ್ಟಾರೆಯಾಗಿ ಕಾರ್ಯಕ್ರಮವು ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಪೂರ್ಣ ಸಹಕಾರದೊಂದಿಗೆ ಯಶಸ್ವಿಯಾಗಿ ಸಮಾಪ್ತಿಯಾಯಿತು.