ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವ

0

ಉಜಿರೆ: ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ದಿನಾಚರಣೆ ಮತ್ತು ವಾರ್ಷಿಕ ಜಾತ್ರೋತ್ಸವ ಜ.26 ಮತ್ತು 27ರ ವರೆಗೆ ಅಲಂಬಾಡಿ ಪದ್ಮನಾಭಾ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಜ.26 ರಂದು ಬೆಳಿಗ್ಗೆ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹಕಲಶ, ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ ನಂತರ ಹಳೆಕೋಟೆ ಶಿರ್ಡಿ ಸಾಯಿ ಸೇವಾ ಕ್ಷೇತ್ರದವರಿಂದ ಭಜನೆ, ಮದ್ಯಾಹ್ನ ಮಹಾ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಸಂಜೆ ಸ್ಥಳೀಯ ಮಹಿಳಾ ತಂಡದಿಂದ ಭಜನೆ, ಬೆಳ್ತಂಗಡಿ ನಾಗೇಂದ್ರ ನಾಯಕ್ ಇವರಿಂದ ಭಜನಾ ಸಂಕೀರ್ತನಾ, ರಾತ್ರಿ ದೇವರ ಬಲಿ ಹೊರಟು ಭೂತ ಬಲಿ ಉತ್ಸವ, ಕಟ್ಟೆ ಪೂಜೆ, ವಸಂತ ಕಟ್ಟೆ ಪೂಜೆ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

ಜ.27ರಂದು ಬೆಳಿಗ್ಗೆ ಗಣಪತಿ ಹೋಮ, ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ ಬಟ್ಟಲು ಕಾಣಿಕೆ, ರುದ್ರಾಭಿಷೇಕ ಮಹಾ ಪೂಜೆ, ಅನ್ನಸಂತರ್ಪಣೆ ನಡೆಯಿತು.ಸಂಜೆ ಕಲ್ಲುರ್ಟಿ, ಕಲ್ಕುಡ ದೈವದ ವೈಭವದ ಭಂಡಾರ ಮೆರವಣಿಗೆ, ಮಹಿಳಾ ಯಕ್ಷ ಬಳಗ ಬೈಲೂರು ಇವರಿಂದ ತಾಳಮದ್ದಳೆ, ರಾತ್ರಿ ರಂಗ ಪೂಜೆ ಬಳಿಕ ದೈವಗಳ ನೇಮೋತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಆನುವಂಶಿಕ ಆಡಳಿತ ಮೋಕ್ತೆಸರ ಎಂ.ವಾಸುದೇವ ಸಂಪಿಗೆತ್ತಾಯ, ಅರ್ಚಕ ಕೆ.ಕೃಷ್ಣ ಹೊಳ್ಳ, ಉತ್ಸವ ಸಮಿತಿಯ ಗೌರವ ಅಧ್ಯಕ್ಷ ವಾಸುದೇವ ಭಟ್, ಅಧ್ಯಕ್ಷ ಕೆ.ರಾಮಚಂದ್ರ ಹೊಳ್ಳ, ಉಪಾಧ್ಯಕ್ಷ ರವೀಂದ್ರ ಕಾರಂತ, ಅಪ್ಪು ನಾಯರ್, ಕಾರ್ಯದರ್ಶಿ ತಿರುಮಲೇಶ್ವರ ಭಟ್, ಜೊತೆ ಕಾರ್ಯದರ್ಶಿ ಕೆ.ಕೊರಗಪ್ಪ ಗೌಡ, ಕಾರ್ಯಧ್ಯಕ್ಷ ಮಂಜಪ್ಪ ಪೂಜಾರಿ, ಕೋಶಾಧಿಕಾರಿ ಉದಯ ಭಾನು, ಜತೆ ಕೋಶಾಧಿಕಾರಿ ನಿರಂಜನ್, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ವಿಠ್ಠಲ್ ನಾಯ್ಕ, ಕಾರ್ಯದರ್ಶಿ ಗಿರೀಶ್, ಸದಸ್ಯರು, ಭಕ್ತರು ಆಗಮಿಸಿ ಸಹಕರಿಸಿದರು.

p>

LEAVE A REPLY

Please enter your comment!
Please enter your name here