ಕಳೆಂಜ: ಶ್ರೀ ಸದಾಶಿವೇಶ್ವರ ದೇವರ ಜಾತ್ರಾ ಮಹೋತ್ಸವ ಜನವರಿ 22 ಮತ್ತು 23 ರಂದು ವಿಜ್ರಂಭಣೆಯಿಂದ ನೆರವೇರಿತು.
22ರಂದು ಊರ ಪರ-ಊರ ಗ್ರಾಮಸ್ಥರು ಅಪಾರ ಹೊರೆ ಕಾಣಿಕೆಯನ್ನು ದೇವರಿಗೆ ಸಮರ್ಪಿಸಿದರು.11 ಗಂಟೆಗೆ ಏಕಾದಶ ರುದ್ರಾಭಿಷೇಕ ಸಿಯಾಳ ಅಭಿಷೇಕ ನಡೆಯಿತು.ದಾನಿಗಳಾದ ಮಧುಕರ್ ರಾವ್ ಮಚ್ಚಳೆರವರು ದೇವರಿಗೆ ನೂತನ ಪ್ರಭಾವಳಿ ಸಮರ್ಪಿಸಿದರು.ಮಧ್ಯಾಹ್ನ ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಸಾಯಂಕಾಲ ಸ್ಥಳೀಯ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಮಹಾಪೂಜೆ, ಶ್ರೀದೇವರ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ ವಸಂತ ಕಟ್ಟೆ ಪೂಜೆ ಬೆಡಿ ಪ್ರದರ್ಶನ ಹಾಗೂ ಅನ್ನಸಂತರ್ಪಣೆ ಬಳಿಕ ಧಾರ್ಮಿಕ ಸಭೆ ನಡೆಯಿತು.
ಧಾರ್ಮಿಕ ಸಭೆಯು ದೇವಳದ ಅಧ್ಯಕ್ಷ ಕೆ.ಶ್ರೀಧರ ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.ಧಾರ್ಮಿಕ ಉಪನ್ಯಾಸ ನೀಡಲು ಆಗಮಿಸಿದ ವಾಣಿ ಕಾಲೇಜಿನ ಆಂಗ್ಲ ಭಾಷೆ ವಿಭಾಗದ ಮುಖ್ಯಸ್ಥರಾದ ಅನುರಾಧ ಕೆ ರಾವ್ ರವರು ಮಾತನಾಡಿ ಹಿಂದು ಧರ್ಮ ಜಗತ್ತಿಗೆ ಮಾದರಿ ಧರ್ಮ ಉಳಿದ ಎಲ್ಲಾ ಧರ್ಮಗಳಿಗೂ ಸೃಷ್ಟಿಕರ್ತರು ಇದ್ದಾರೆ.ಅನೇಕ ಬಗೆಯ ಆಚರಣೆಯಿಂದ ಕೂಡಿದೆ ಹಿಂದೂ ಧರ್ಮ ಎಂದರು.ದೇವಾಲಯಕ್ಕೆ ನಾವು ಸಾಮಾಜಿಕ ನಂಬಿಕೆಗೋಸ್ಕರ ಹೋಗಬೇಕು. ದೇವಾಲಯ ಎಂದರೆ ನಂಬಿಕೆಗಳ ಮಹಾಶಕ್ತಿ ಹಿಂದು ಧರ್ಮ ನಿಂತಿರುವುದೇ ನಂಬಿಕೆಯ ಆಧಾರದಲ್ಲಿ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿಶಿಲ ಸೀಮಾ ಚಿತ್ಪಾವನ ಸಮಾಜ ಸಂಘದ ಅಧ್ಯಕ್ಷ ವರದಶಂಕರ ದಾಮ್ಲೆ, ಕಳೆಂಜ ಧನಲಕ್ಷ್ಮೀ ಸೌಂಡ್ಸ್ ಮತ್ತು ಲೈಟ್ಸ್ ಮಾಲಕ ಗೋಪಾಲ ಗೌಡ ಪುಳ್ಳಯ, ಸಮಾಜ ಸೇವಕ ಹಾಗೂ ಪ್ರಗತಿಪರ ಕೃಷಿಕ ಜಿನ್ನಪ್ಪ ಗೌಡ ಕುತ್ಯಡ್ಕ ನಿಡ್ಲೆ, ದಾನಿ ಮಧುಕರ್ ರಾವ್ ಮಚ್ಚಳೆ, ನಿವೃತ್ತ ಸುಬೇದಾರ್ ಮಹಾಬಲ.ಕೆ ಇವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.ಬಿಡುವಿನ ವೇಳೆಯಲ್ಲಿ ದೇವಳದ ಶ್ರಮದಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ನಿಶ್ಮಿತಾ ಮೂಡಾಯಿ ಮಜಲು, ಮಧುಶ್ರೀ ಕಜೆತ್ತೋಡಿ, ದೀಕ್ಷಾ ಬರಮೇಲು, ವಿಶ್ಮಿತಾ ಪಂಚಮಿಪಾದೆ ಇವರನ್ನು ಕೂಡ ಸನ್ಮಾನಿಸಲಾಯಿತು.
ನಂತರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಮೂಡಿ ಬಂದ ಶಿವದೂತೆ ಗುಳಿಗೆ ಸಾಮಾಜಿಕ ತುಳು ನಾಟಕ ಪ್ರದರ್ಶನ ನಡೆಯಿತು.ಕಾರ್ಯಕ್ರಮದ ಪ್ರಾರ್ಥನೆಯನ್ನು ಹರಿಪ್ರಿಯ, ಸ್ವಾಗತವನ್ನು ಕೇಶವ ಗೌಡ ಮಲ್ಲಜಾಲು, ಪ್ರಾಸ್ತಾವಿಕ ನುಡಿಯನ್ನು ರಾಜಾರಾಮ ಸಂಗಮನಗರ, ಧನ್ಯವಾದವನ್ನು ವಸಂತ ಗೌಡ ಬಂದಾರಿಮಜಲು, ನಿರೂಪಣೆಯನ್ನು ಶ್ವೇತ ಪೆರ್ಲ ಮತ್ತು ರಾಜರಾಮ ರವರು ನೆರವೇರಿಸಿದರು.
23ರಂದು ಬೆಳಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಮಧ್ಯಾಹ್ನ 12 ಗಂಟೆಗೆ ದೇವರಿಗೆ ಕಲಶಾಭಿಶೇಕ, ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.