ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ

0

ಬೆಳ್ತಂಗಡಿ: ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀರಾಮೋತ್ಸವವು ಬಹಳ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ನಡೆಯಿತು.

ಬೆಳಗ್ಗೆ 5:15ಕ್ಕೆ ವಿಷ್ಣು ಸಹಸ್ರನಾಮ ಪಠಣದೊಂದಿಗೆ ಆರಂಭಗೊಂಡು ಪೂಜಾ ವಿಧಿ ವಿಧಾನಗಳೊಂದಿಗೆ ನಡೆಯಿತು.

ವಿಶೇಷವಾಗಿ ಸಾರ್ವಜನಿಕರಿಗೆ ಗೂಡು ದೀಪ ಸ್ಪರ್ಧೆ ಹಾಗೂ ಮಕ್ಕಳಿಗೆ ಪ್ರಭು ಶ್ರೀ ರಾಮ, ಸೀತಾಮಾತೆ ಹಾಗೂ ಹನುಮಂತನ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು.ಇದರೊಂದಿಗೆ ಅಯೋಧ್ಯೆಯಲ್ಲಿನ ಶ್ರೀ ರಾಮದೇವರ ಪ್ರತಿಷ್ಠಾಪನೆಯ ನೇರ ವೀಕ್ಷಣೆಯು ಟ್ರಸ್ಟ್ ವತಿಯಿಂದ ಆಯೋಜನೆ ಮಾಡಲಾಗಿತ್ತು.ಇದರ ಸದುಪಯೋಗವನ್ನು ಊರ ಹಾಗೂ ಪರ ಊರ ಭಕ್ತರು ಮಾಡಿದರು.ನಂತರ ಭಜನೆ ಹಾಗೂ ರಾಮ ತಾರಕ ಮಂತ್ರದೊಂದಿಗೆ ಧಾರ್ಮಿಕ ಸಭೆಯು ಆರಂಭಗೊಂಡು ಗ್ರಾಮದ ಕರಸೇವಕರಿಗೆ ಗೌರವಾರ್ಪಣೆ ಮಾಡಲಾಯಿತು ಮತ್ತು ಡಾ। ಪ್ರದೀಪ್ ಆಟಿಕುಕ್ಕೆ ಅವರು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಗೋಪಾಲಕೃಷ್ಣ ಸೇವಾ ಟ್ರಸ್ಟಿನ ಅಧ್ಯಕ್ಷ ಹರೀಶ್ ಸಾಲ್ಯಾನ್, ನಿಕಟ ಪೂರ್ವಾಧ್ಯಕ್ಷರಾದ ಎ.ಬಿ.ಉಮೇಶ್, ಉಪಾಧ್ಯಕ್ಷರಾದ ತನುಜ ಶೇಖರ್, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ವಿಜಯ ಕೆ ಹೊಡಿಕಾರ್ ವೇದಿಕೆಯಲ್ಲಿದ್ದರು.

ಪ್ರಧಾನ ಕಾರ್ಯದರ್ಶಿಗಳಾದ ಧರ್ಣಪ್ಪ ಮೂಲ್ಯ ಸ್ವಾಗತಿಸಿ, ಗಣೇಶ್ ನೆಲ್ಲಿಪಲ್ಕೆ ವಂದಿಸಿದರು ಹಾಗೂ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here