ಬೆಳ್ತಂಗಡಿ: ಗ್ರಾಮ ಅಭಿವೃದ್ಧಿ ಯೋಜನೆಯ ಮುಖಾಂತರ ಗ್ರಾಮ ಮಟ್ಟದಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ. ಸರಕಾರವು ಅನುಷ್ಠಾನ ಮಾಡುವಂತಹ ಪ್ರತಿಯೊಂದು ಕಾರ್ಯಕ್ರಮವನ್ನು ಡಾ.ಡಿ. ವಿರೇಂದ್ರ ಹೆಗ್ಗಡೆ ಅವರು ಗ್ರಾಮಭಿವೃದ್ಧಿ ಯೋಜನೆಯ ಮೂಲಕ ಗ್ರಾಮಮಟ್ಟದಲ್ಲಿ ಪ್ರತಿಯೊಂದು ಕಾರ್ಯಕ್ರಮವನ್ನು ಜನರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿರುವುದು ಅವಿಸ್ಮರಣೀಯ ಎಂದು ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ರೈ ಹೇಳಿದರು.
ಮೂರುಗೋಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜ.19ರಂದು ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ತಣ್ಣೀರುಪಂತ ವಲಯದ ಪುತ್ತಿಲ ಎ ಬಿ ಒಕ್ಕೂಟಗಳ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ಮಾತನಾಡಿ ಒಕ್ಕೂಟದ ನಿಕಟಪೂರ್ವ ಪದಾಧಿಕಾರಿಗಳು ಇಂದು ನಿರ್ಗಮನಗೊಂಡು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರ ಮಾಡಿದ್ದಾರೆ. ನೂತನ ಪದಾಧಿಕಾರಿಗಳು ಒಕ್ಕೂಟದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ಬಾರ್ಯ ಗ್ರಾ.ಪಂ. ಅಧ್ಯಕ್ಷಪಿ. ಕೆ. ಉಸ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಯಾದವ ಪೂಜಾರಿ ಅಂದ್ ಲಾಯಿದಡಿ, ಸ್ಪಂದನ ರೈತರ ಸೇವಾಕೂಟ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಪಂರ್ದಗುತ್ತು, ಪುತ್ತಿಲ ಬಿ ಒಕ್ಕೂಟ ಅಧ್ಯಕ್ಷ ಉಮೇಶ್ ಶೆಟ್ಟಿ , ಸೇವಾಪ್ರತಿನಿಧಿ ಶಾಂತ, ಸುನಿತಾ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಶಿವರಾಮ ಒಕ್ಕೂಟದ ವರದಿ ವಾಚಿಸಿದರು. ಸಿ. ಎಸ್. ಸಿ ಸೇವಾದಾರ ಸೌಮ್ಯ ಪ್ರಾರ್ಥಿಸಿ, ಜನಜಾಗೃತಿ ತಾಲೂಕು ಕಾರ್ಯಕಾರಿ ಸದಸ್ಯ ಮೋನಪ್ಪ ಗೌಡ ಮಣಿಲ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಗೌಡ ವಂದಿಸಿ, ಮೇಲ್ವಿಚಾರಕಿ ವಿದ್ಯಾ ನಂದ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.