ಸುಲ್ಕೇರಿ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಪಂಚಾಯತ್ ಅದ್ಯಕ್ಷೆ ಗಿರಿಜಾ ರವರ ಅಧ್ಯಕ್ಷತೆಯಲ್ಲಿ ಜ.18 ರಂದು ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಉಪವಲಯಾರಣ್ಯಧಿಕಾರಿ ಸುರೇಶ್ ಗೌಡ ಸಭೆಯನ್ನು ನಡೆಸಿಕೊಟ್ಟರು.ಸುಲ್ಕೇರಿ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮಸ್ಥರು ಚರ್ಚಿಸಿದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಶುಭಕರ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಗ್ರಾ.ಪಂ ಸದಸ್ಯರಾದ ರವಿ ಪೂಜಾರಿ ಹಾರಡ್ಡೆ, ನಾರಾಯಣ ಪೂಜಾರಿ ಸುಲ್ಕೇರಿ, ಪೂರ್ಣೀಮಾ ನಾವರ, ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ನಾಯ್ಕ್, ಸಿಬ್ಬಂದಿಗಳು ಸಹಕರಿಸಿದರು.
p>