ರುಡ್ಸೆಟ್ ಸಂಸ್ಥೆಯಲ್ಲಿ ನಡೆದ ಸಿಸಿ ಕೆಮರಾ ಅಳವಡಿಸುವಿಕೆ ಮತ್ತು ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ- ನಮ್ಮ ದೇಶದ ದೊಡ್ಡ ಆಸ್ತಿಯೇ ಮಾನವ ಸಂಪತ್ತು: ರಕ್ಷಿತ್ ಶಿವರಾಂ

0

ಉಜಿರೆ: ನಮ್ಮ ದೇಶದ ದೊಡ್ಡ ಆಸ್ತಿ ಯಾವುದೆಂದರೆ ಮಾನವ ಸಂಪನ್ಮೂಲ, ಈ ಸಂಪತ್ತು ನಮ್ಮ ದೇಶವನ್ನು ಒಂದು ಬಲಿಷ್ಠ ದೇಶವನ್ನಾಗಿ ಮಾಡಿದೆ. ದೇಶದ ಪ್ರತಿಯೊಬ್ಬ ಯುವ ಜನತೆಯು ಉದ್ಯೋಗದ ಮೂಲಕ ದೇಶಕ್ಕೆ ಒಂದು ಸಣ್ಣ ಕೊಡುಗೆ ಕೊಟ್ಟರೆ ನಮ್ಮ ದೇಶ ಎಲ್ಲಾ ದೇಶಗಳಿಗಿಂತ ಅಗ್ರಗಣೀಯವಾಗಿ ಬೆಳೆಯುತ್ತದೆ ಎಂದರು.ಅವರು ರುಡ್ಸೆಟ್ ಸಂಸ್ಥೆಯಲ್ಲಿ ನಡೆದ ಸಿಸಿ ಕೆಮರಾ ಅಳವಡಿಸುವಿಕೆ ಮತ್ತು ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲರಿಗೂ ಉದ್ಯೋಗ ಕೊಡಲು ಸಾದ್ಯವಿಲ್ಲ, ಆದರೆ ರುಡ್ಸೆಟ್ ನಂತಹ ಸಂಸ್ಥೆಗಳು ಇಂತಹ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಬೆಳೆದು ನಿಂತಿರುವಂತದ್ದು ಹೆಮ್ಮೆಯ ವಿಷಯ ಡಾ.ಡಿ.ವೀರೇಂದ್ರ ಹೆಗ್ಗೆಡೆಯವರು ತುಂಬಾ ದೂರದೃಷ್ಠಿಯಿಂದ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದಾರೆ, ಈ ಸಂಸ್ಥೆಯ ಹೆಸರನ್ನು ಉಳಿಸುವ ಕೆಲಸವನ್ನು ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮಾಡಬೇಕು, ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಗಾದೆ ಇತ್ತು, ಆದರೆ ಇವತ್ತು ಉದ್ಯೋಗಂ ಮನುಷ್ಯ ಲಕ್ಷಣಂ ಎಂಬಂತ್ತಾಗಿದೆ.

ಇವತ್ತು ಮಹಿಳೆಯರು ಕೂಡ ಎಲ್ಲಾ ರೀತಿಯ ಉದ್ಯೋಗಗಳಲ್ಲಿ ತೋಡಗಿಸಿಕೊಂಡಿರುವುದನ್ನು ನಾವು ಕಾಣುತ್ತೇವೆ ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷರೂ ಮತ್ತು ಕೆಪಿಸಿಸಿ ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರವರು ಅಭಿಪ್ರಾಯ ಪಟ್ಟರು. ಈ ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಎಮ್. ಸುರೇಶ್ರವರು ಅಧ್ಯಕ್ಷ ಸ್ಥಾನ ವಹಿಸಿದ್ದರು, ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ರವರು ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಕಿ ಅನಸೂಯ ವಂದಿಸಿದರು.ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

p>

LEAVE A REPLY

Please enter your comment!
Please enter your name here