ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿಯಲ್ಲಿ ನಿನ್ನೆ ಪವಿತ್ರ ಪರಮ ಪ್ರಸಾದದ ಭಾನುವಾರ ಹಾಗೂ ರೋಮ್ ನಿಂದ ಬಂದ ಪವಿತ್ರ ಶಿಲುಬೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ವಿಶ್ರಾಂತ ಬಿಷಪ್ ರವರಾದ ಅತಿ ವಂದನಿಯ ಬಿಷಪ್ ರೆ.ಪಾ.ಎಲೋಶಿಯಸ್ ಪಾವ್ಲ್ ಡಿಸೋಜ ರವರು ಪವಿತ್ರ ಶಿಲುಬೆಯನ್ನು ಬೆಳ್ತಂಗಡಿ ಚರ್ಚಿನ ಪ್ರದಾನ ಗುರುಗಳಾದ ರೆ.ಪಾ.ವಾಲ್ಟರ್ ಡಿ’ಮೆಲ್ಲೊ ಹಾಗೂ ಮಂಜೊಟ್ಟಿ ಚರ್ಚಿನ ಗುರುಗಳಾದ ರೆ.ಪಾ.ಪ್ರವೀಣ್ ಡಿಸೋಜ ಹಸ್ತಾಂತರಿಸಿದರು.ಆ ಶಿಲುಬೆಯನ್ನು ಭವ್ಯ ಮೆರವಣಿಗೆ ಮೂಲಕ ಚರ್ಚೆಗೆ ಕೊಂಡೊಯ್ಯಲಾಯಿತು.ತದನಂತರ ಪವಿತ್ರ ಬಲಿಪೂಜೆ ನಡೆಯಿತು.
ಬೆಳ್ತಂಗಡಿ ಚರ್ಚ್‌ನಲ್ಲಿ ಬಾವ್ಯೆಕ್ಯತೆಯ ಭಾನುವಾರ ಆಚರಣೆಯ ಪ್ರಯುಕ್ತ ಪವಿತ್ರ ಪರಮ ಪ್ರಸಾದವನ್ನು ಸಾರ್ವಜನಿಕವಾಗಿ ಭವ್ಯ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.ಬೆಳ್ತಂಗಡಿ ಹಾಗೂ ಮಂಜೊಟ್ಟೆ ಚರ್ಚಿನ ಸಾವಿರಾರು ಭಕ್ತರು ಭಾಗವಹಿಸಿದರು.
ಈ ಕಾರ್ಯದಲ್ಲಿ ಬೆಳ್ತಂಗಡಿ ಚರ್ಚಿನ ಪ್ರದಾನ ಗುರುಗಳಾದ ವಂದನಿಯ ವಾಲ್ಟರ್ ಡಿ’ಮೆಲ್ಲೊ, ಹೋಲಿ ರಿಡೀಮರ್ ಶಾಲೆಯ ಪ್ರಾಂಶುಪಾಲರಾದ ವಂದನಿಯ ಕ್ಲಿಪರ್ಡ್ ಪಿಂಟೊ, ಮಂಜೊಟ್ಟಿ ಚರ್ಚಿನ ಗುರುಗಳಾದ ಪ್ರವೀಣ್ ಡಿಸೋಜ, ಬೆಳ್ತಂಗಡಿ ವಲಯ ಚರ್ಚಿನ ಗುರುಗಳು ಹಾಗೂ ಎರಡೂ ಚರ್ಚಿನ ಪಾಲನಾ ಪರಿಷತ್ತಿನ ಉಪಾಧ್ಯಕ್ಷ, ಕಾರ್ಯದರ್ಶಿ, ಆಯೋಗಗಳ ಸಂಯೋಜಕರು ಹಾಗೂ ಪಾಲನ ಪರಿಷತ್ತಿನ ಸದಸ್ಯರು ಹಾಜರಿದ್ದರು.