ಬೆಳ್ತಂಗಡಿ: ನಾಯಕತ್ವ, ಅನುಭವ ಮತ್ತು ಅವಕಾಶದ ಆಗರವೇ ಲಿಯೋ ಕ್ಲಬ್.ಲಯನ್ಸ್ ನ ಹಿರಿಯರ ದಾರಿಯಲ್ಲಿ ಲಿಯೋ ಕ್ಲಬ್ ಕೆಲಸ ಮಾಡುತ್ತದೆ.ಹಣದ ಮೂಲಕ ಮಾಡುವ ಸೇವೆಗಿಂತಲೂ ಮಿಗಿಲಾಗಿ ದೈಹಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಮತ್ತು ಯುವ ಸಮೂಹ ಸಲ್ಲಿಸುವ ಸೇವೆಯೇ ಲಿಯೋ ಕ್ಲಬ್ ಚಟುವಟಿಕೆ ಎಂದು ಲಯನ್ಸ್ ಜಿಲ್ಲಾ ಲಿಯೋ ಅಧ್ಯಕ್ಷೆ ಡಾ.ರಂಜಿತಾ ಶೆಟ್ಟಿ ಹೇಳಿದರು.
ಜ.13 ರಂದು ಗುರುವಾಯನಕೆರೆ ಮಯೂರ ಆರ್ಕೆಡ್ ನಲ್ಲಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾರ್ಗದರ್ಶನದಲ್ಲಿ ಹೊಸದಾಗಿ ರಚನೆಯಾದ ಲಿಯೋ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಅವರು ಪದಗ್ರಹಣ ಅಧಿಕಾರಿಯಾಗಿ ಮಾತನಾಡಿದರು.
ಲಯನ್ಸ್ ಜಿಲ್ಲೆಯಲ್ಲಿ 38 ಲಿಯೋ ಕ್ಲಬ್ಸ್ ಗಳು, 6 ಅಲ್ಫಾ ಕ್ಲಬ್ ಗಳು, 32 ಒಮೆಗಾ ಕ್ಲಬ್ ಗಳು ಕಾರ್ಯನಿರ್ವಹಿಸುತ್ತಿವೆ.ಜಿಲ್ಲೆಯಲ್ಲಿ ಒಟ್ಟು 1,650 ಸದಸ್ಯರು, ಇಂಟರ್ನ್ಯಾಷನಲ್ ನಲ್ಲಿ 150 ದೇಶಗಳಲ್ಲಿ 8 ಸಾವಿರಕ್ಕೂ ಅಧಿಕ ಲಿಯೋ ಕ್ಲಬ್ ಗಳಿದ್ದು, 2.20 ಲಕ್ಷ ಲಿಯೋ ಸದಸ್ಯರಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ವಹಿಸಿದ್ದು ಪ್ರಸ್ತಾವನೆಗೈದರು.
ಜಿಲ್ಲಾ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ ಮಾತನಾಡಿ, ಸೇವೆಯಲ್ಲಿ ಮತ್ತು ಜಿಲ್ಲಾ ನಿರ್ದೇಶನ ಪಾಲನೆಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಐಎಎಸ್, ಐಪಿಎಸ್ ತರಬೇತುದಾರರಾದ ಅನಿತಾ ಲಕ್ಷ್ಮೀ ಆಚಾರ್ಯ ಮತ್ತು ವೆಂಕಟೇಶ್ ಪಾಟೀಲ್ ಇವರು ಸಂಪನ್ಮೂಲ ಭಾಷಣ ಮಾಡಿದರು.ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ, ವಲಯಾಧ್ಯಕ್ಷರುಗಳಾದ ದಿನೇಶ್ ಎಂ.ಕೆ ಮತ್ತು ಪ್ರತಿಮಾ ವೆಂಕಟೇಶ ಹೆಬ್ಬಾರ್ ಶುಭಹಾರೈಸಿದರು.ಲಿಯೋ ಕ್ಲಬ್ ನಿರ್ದೇಶಕ ಡಾ.ದೇವಿಪ್ರಸಾದ್ ಬೊಳ್ಮ ಲಿಯೋ ಕ್ಲಬ್ ಸದಸ್ಯರನ್ನು ಪರಿಚಯಿಸಿದರು.
ಅಧ್ಯಕ್ಷೆ ಅಪ್ಸರಾ ಹೆಚ್. ಆರ್ ಗೌಡ, ಕಾರ್ಯದರ್ಶಿ ನಿರೀಕ್ಷಾ ಎನ್ ನಾವರ ಮತ್ತು ಕೋಶಾಧಿಕಾರಿ ಅಭೀಜ್ಞಾ ಗೌಡ ಅವರ ತಂಡ ಪದಗ್ರಹಣ ಸ್ವೀಕರಿಸಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅನಂತಕೃಷ್ಣ ಮತ್ತು ಕೋಶಾಧಿಕಾರಿ ಶುಭಾಷಿಣಿ ಉಪಸ್ಥಿತರಿದ್ದರು.ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ನಿರೂಪಿಸಿದರು.
ವಸಂತ ಶೆಟ್ಟಿ, ರಾಮಕೃಷ್ಣ ಗೌಡ, ಪ್ರಭಾಕರ ಗೌಡ ಬೊಳ್ಮ, ಕೃಷ್ಣ ಆಚಾರ್, ನಿತ್ಯಾನಂದ ನಾವರ, ರವೀಂದ್ರ ಶೆಟ್ಟಿ ಬಳೆಂಜ, ಧತ್ತಾತ್ರೇಯ ಗೊಲ್ಲ, ಕಿರಣ್ ಕುಮಾರ್ ಶೆಟ್ಟಿ, ಲಕ್ಷ್ಮಣ ಪೂಜಾರಿ ವಿವಿಧ ಜವಾಬ್ದಾರಿ ನಿರ್ವಹಿಸಿದರು.ಡಾ.ಭಾಷಿಷಿ ಪ್ರಾರ್ಥನೆ ಹಾಡಿದರು.ನಿರೀಕ್ಷಾ ಎನ್ ನಾವರ ವಂದಿಸಿದರು.