ಬೆಳ್ತಂಗಡಿ: ತಾಲೂಕಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.11 ರಂದು ಸಂಜೆ ನಡೆದಿದೆ.
ಬೆಳ್ತಂಗಡಿಯ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ಪ್ರತೀಕ್ ಬಾಳಿಗ (19ವ ) ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿದ್ದು ನಿನ್ನೆಯ ಪರೀಕ್ಷೆಗೆ ಹಾಜರಾಗಿದ್ದು ಇಂದು ಪರೀಕ್ಷೆ ಇಲ್ಲದ ಕಾರಣ ರಜೆ ಇತ್ತು ಎಂದು ತಿಳಿದು ಬಂದಿದೆ.
ಮಡಂತ್ಯಾರು ಮಾರಿಗುಡಿ ಬಳಿಯ ಹೊಸಮನೆ ಪ್ರಶಾಂತ್ ಬಾಳಿಗರವರ ಪುತ್ರ ಇವರು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ಸರಿಸುಮಾರು ಸಂಜೆ 4:00 ಗಂಟೆ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
p>