ಬಳಂಜ: ದ.ಕ ಉಡುಪಿ ಜಿಲ್ಲೆ ಧರ್ಮದ ನೆಲೆವೀಡು ಎಂದೇ ಖ್ಯಾತಿ ಹೊಂದಿದ್ದು ಇದು ಹಿಂದೂ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸುವ ಜಿಲ್ಲೆ ಅಲ್ಲದೆ ಸನಾತನ ಹಿಂದೂ ದರ್ಮವನ್ನು ಬೆಳೆಸುವ ಜಿಲ್ಲೆಯು ಹೌದು.ಅಜೀರ್ಣಾವಸ್ಥೆಯಲ್ಲಿ ಇರುವ ದೇವಸ್ಥಾನ, ದೈವಸ್ಥಾನದ ಜೀರ್ಣೋದ್ಧಾರ ಮಾಡಿದರೆ ಜೀವನ ಪಾವನವಾದಂತೆ.ಇಂದು ಬೋಂಟ್ರೊಟ್ಟುವಿನ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದು ಇಲ್ಲಿನ ಭಕ್ತರ ಜೀವನ ಪಾವನವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಡಿ.31 ರಂದು ಬಳಂಜ ಬೋಂಟ್ರೊಟ್ಟು ಶ್ರಿ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ) ಮತ್ತು ಕಲಶಾಭಿಷೇಕ ಸಮಿತಿ ವತಿಯಿಂದ ನಡೆದ ಮಹಾ ಚಂಡಿಕಾಯಾಗ ಮತ್ತು ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ, ನೇಮೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಾನಪದ ಸಂಶೋದಕ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ದಾರ್ಮಿಕ ಉಪನ್ಯಾಸ ನೀಡಿ ದೈವ ದೇವರ ಇತಿಹಾಸ ತಿಳಿದರೆ ಪ್ರತಿಯೊಂದಕ್ಕೂ ಒಂದೊಂದು ರೀತಿಯ ಸತ್ಯ ಘಟನೆಗಳು ಇದೆ.ಯಾರೇ ಎಷ್ಟೇ ಉನ್ನತ ಮಟ್ಟಕ್ಕೆ ಏರಿದರು ದೈವ ದೇವರ ಅರಾದನೆ ಮರೆಯಬಾರದು.ಕೆಲವೊಂದು ಅಡೆತಡೆಗಳು ಬರುವುದು ದೈವ ದೇವರನ್ನು ಮರೆತರೆ ಮಾತ್ರ ಬರುವುದು ಎಂದರು.
ಕಾರ್ಯಕ್ರಮದಲ್ಲಿ ಅಳದಂಗಡಿ ಅರಮನೆಯ ಅರಸರಾದ ಡಾ.ಪದ್ಮಪ್ರಸಾದ್ ಅಜಿಲ, ದ.ಕ ಜಿಲ್ಲಾ ದಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬಳಂಜ ಗ್ರಾ ಪಂ ಅದ್ಯಕ್ಷೆ ಶೋಭಾ ಕುಲಾಲ್, ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅದ್ಯಕ್ಷ ರಕ್ಷಿತ್ ಶಿವರಾಂ, ಬೆಳ್ತಂಗಡಿ ಶ್ರಿ ಗುರುನಾರಾಯಣ ಸೇವಾ ಸಂಘದ ಅದ್ಯಕ್ಷ ಚಿದಾನಂದ ಪುಜಾರಿ ಎಲ್ದಕ್ಕ, ಮಂಗಳೂರು ಶ್ರಿ ಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರ ರೋಗ ತಜ್ಞ ಡಾ.ಸದಾನಂದ ಪೂಜಾರಿ, ಮಂಗಳೂರು ಬ್ರಹ್ಮಶ್ರಿ ಬಿಲ್ಲವ ವೇದಿಕೆ ಅದ್ಯಕ್ಷ ಕೆ.ಟಿ ಸುವರ್ಣ, ಕಲಶಾಭಿಷೇಕ ಸಮಿತಿ ಅದ್ಯಕ್ಷ ಮಹಾಬಲ ಪೂಜಾರಿ, ಪ್ರಗತಿ ಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಟ್ರಸ್ಟ್ ನ ಅಧ್ಯಕ್ಷ ಹರೀಶ್ ಪೂಜಾರಿ ಬೈಲಬರಿ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಕ್ಷೇತ್ರಕ್ಕೆ ಅನುದಾನ ನೀಡಿ ಸಹಕರಿಸಿದ ಶಾಸಕ ಹರೀಶ್ ಪೂಂಜ, ಶ್ರೀನಿವಾಸ ಅಮ್ಮುಣ್ಣಾಯ ಅಸ್ರಣ್ಣರು ಮದ್ಡಕ್ಕ, ಮಹಾಬಲ ಪೂಜಾರಿಯವರನ್ಬು ಗೌರವಿಸಲಾಯಿತು.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ಸದಾನಂದ ಪಿ ಸಾಲಿಯಾನ್ ವಂದಿಸಿದರು.ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.