ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯೆ, ಉದ್ಯೋಗ, ಸಂಪರ್ಕ ಉದ್ದೇಶದೊಂದಿಗೆ ಮುನ್ನಡೆಯುತ್ತಿರುವ ಯುವವಾಹಿನಿ ಬೆಳ್ತಂಗಡಿ ಘಟಕದ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ವಿದ್ಯಾನಿಧಿ, ಮನೆ ಹಸ್ತಾಂತರ ಕಾರ್ಯಕ್ರಮ ಡಿ.18 ರಂದು ಶ್ರೀ ಗುರುನಾರಾಯಣ ಸಂಕೀರ್ಣದ ಸಭಾ ಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್ ವಹಿಸಿದ್ದರು.ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ರವರು ನೂತನ ಅಧ್ಯಕ್ಷ ಸದಾಶಿವ ಊರ ತಂಡದ ನೂತನ ಪದಾಧಿಕಾರಿಗಳಿಗೆ ಪದಪ್ರಧಾನ ನೆರವೇರಿಸಿದರು.
ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧಕಿ ನಿರೀಕ್ಷಾ ಎನ್.ನಾವೂರು, ಕ್ರೀಡಾ ಸಾಧಕ ಸುಶಾಂತ್ ಎಸ್.ಪೂಜಾರಿ ಕುದ್ಯಾಡಿ, ಆಸರೆಗೊಂದು ಸೂರು ಯೋಜನೆಯಡಿ ಸಾಂತ್ವನ ನಿಧಿಯನ್ನು ವೈದ್ಯಕೀಯ ನೆರವು ಆಗಿ ಸುಂದರ ಪೂಜಾರಿ, ಗಿರಿಜಾ, ವಿದ್ಯಾರ್ಥಿವೇತನವನ್ನು ಪೃಥ್ವಿರಾಣಿ ಇವರಿಗೆ ಅತಿಥಿಗಳು ಹಸ್ತಾಂತರಿಸಿದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಹರೀಶ್ ಪೂಜಾರಿ ಬೈಲಬರಿ, ಕೇಂದ್ರ ಸಮಿತಿಯ ಕಾರ್ಯದರ್ಶಿ ಬಾಬು ಪೂಜಾರಿ, ಕೋಶಾಧಿಕಾರಿ ಎಂ.ಕೆ.ಪ್ರಸಾದ್, ಸಲಹೆಗಾರ ರಮಾನಂದ ಸಾಲಿಯಾನ್, ಜಯರಾಜ್ ನಡಕ್ಕರ, ಯುವವಾಹಿನಿ ಘಟಕದ ಪದಾಧಿಕಾರಿಗಳು, ಸಲಹೆಗಾರರು, ನಿರ್ದೇಶಕರು, ಸದಸ್ಯರು, ನೂತನ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯದರ್ಶಿ ಸುನೀಲ್ ಕನ್ಯಾಡಿ ವರದಿ ವಾಚಿಸಿದರು, ಚಂದ್ರಹಾಸ ಬಳಂಜ ನಿರೂಪಿಸಿದರು.