ನಾಳೆ(ಡಿ.19) ಗುರುವಾಯನಕೆರೆಯಲ್ಲಿ ಹೊಟೇಲ್ ರೇಸ್ ಇನ್ ಬೋರ್ಡಿಂಗ್‌, ಲಾಡ್ಜಿಂಗ್ ಶುಭಾರಂಭ

0

ಗುರುವಾಯನಕೆರೆ: ಹೋಟೇಲ್ ರೇಸ್ ಇನ್ ಬೋರ್ಡಿಂಗ್ ಲಾಡ್ಜಿಂಗ್ ಗುರುವಾಯನಕೆರೆಯಲ್ಲಿ ಡಿ.19ರಂದು ಶುಭಾರಂಭಗೊಳ್ಳಲಿದೆ.

ಗುರುವಾಯನಕೆರೆಯಲ್ಲಿ ಆರಂಭಗೊಳ್ಳಲಿದೆ ಹೋಟೇಲ್ ರೇಸ್ ಇನ್ ಬೋರ್ಡಿಂಗ್‌ ಲಾಡ್ಜಿಂಗ್:
ಗುರುವಾಯನಕೆರೆ ಎಂಬ ಪುಟ್ಟ ಊರು.ಇಲ್ಲಿ ಪ್ರಾಚೀನ ಕಾಲದ ದೊಡ್ಡ ಕೆರೆ ಇದೆ. 1908ರಲ್ಲಿ ತಾಮ್ರ ತಯಾರಿಸುವ ಕಾರ್ಖಾನೆ ಕೂಡ ಇತ್ತು.ಅನೇಕ ಜನರು ಇಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಇಲ್ಲಿಗೆ 10 ನಿಮಿಷದ ದಾರಿ.20 ನಿಮಿಷದಲ್ಲಿ ಧರ್ಮಸ್ಥಳಕ್ಕೆ ಕ್ರಮಿಸಬಹುದು. ಬೆಳ್ತಂಗಡಿ ತಾಲೂಕು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಧರ್ಮಸ್ಥಳ, ಶಿಶಿಲೇಶ್ವರ ದೇವಸ್ಥಾನ. ಅಲ್ಲಿ ಹರಿಯುವ ಕಪಿಲ ನದಿ, ಬಂಡಾಜೆ ಫಾಲ್ಸ್, ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ, ಅರ್ಬಿ ಫಾಲ್ಸ್, ದೊಂಡೋಲೆ ಫಾಲ್ಸ್, ಜಮಾಲಾಬಾದ್ ಕೋಟೆ, ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್, ಸಂತ ಲಾರೆನ್ಸ್ ಕ್ಯಾಥೆಡ್ರೆಲ್, ಎತ್ತಿನ ಭುಜ ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳು ಜನರನ್ನು ಆಕರ್ಷಿಸುತ್ತಿದೆ.ಗುರುವಾಯನಕೆರೆ ಬೆಳೆದ ಹಾಗೆ ವ್ಯಾಪಾರ, ಉದ್ದಿಮೆ ಕೂಡ ಇಲ್ಲಿ ಬೆಳೆದಿದೆ. ಇಲ್ಲಿನ ಎಕ್ಸೆಲ್ ಕಾಲೇಜ್ ಕೂಡ ದ. ಕ. ಜಿಲ್ಲೆ ಅಲ್ಲದೆ ಉಡುಪಿ, ಕೊಡಗು, ಕಾಸರಗೋಡು ಸಹಿತ ದೇಶದಲ್ಲಿಯೇ ಇಲ್ಲಿಯ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಕಾಲೇಜ್‌ಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹತ್ತೂರಿನಲ್ಲಿಯೂ ಚಿರಪರಿಚಿತ ಹೆಸರಾಗಿರುವ ಗುರುವಾಯನಕೆರೆಯಲ್ಲಿ ಕಳೆದ 112 ವರ್ಷಗಳ ಹಿಂದೆ ಚಿಕ್ಕ ಬಟ್ಟೆ ಮಳಿಗೆಯಿಂದ ತನ್ನ ಮುತ್ತಾತ ಪ್ರಾರಂಭಿಸಿದ್ದ ಸಂಸ್ಥೆಯಿಂದ ಪ್ರೇರೇಪಣೆ ಪಡೆದ ವಿಜಯ್ ಡಿ ಕುನ್ಹರವರು ಇದೀಗ ಐಷಾರಾಮಿ ಹೋಟೆಲ್ ಪ್ರಾರಂಭಿಸುವ ಕನಸು ಕಂಡಿದ್ದಾರೆ. ವಿಜಯ್‌ರವರ ತಾತ ಕಾಶ್ಮೀರ್ ಡಿ ಕುನ್ಹಾರವರು ಪ್ರಾರಂಭಿಸಿದ್ದ ಡಿಕುನ್ನ ಕ್ಲಾತ್ ಸೆಂಟರ್ ಮತ್ತು ತಾಮ್ರದ ಪಾತ್ರೆಗಳನ್ನು ತಯಾರಿಸುವ ಘಟಕ ಕೂಡ ಗುರುವಾಯನಕೆರೆಗೆ ಬಹಳಷ್ಟು ಕೊಡುಗೆ ನೀಡಿದೆ. ಆಗಿನ ಕಾಲದಲ್ಲಿ ಕಾಫಿ ಎಸ್ಟೇಟ್ ಅನ್ನೂ ಕಾಶ್ಮೀರ್ ಡಿ ಕುನ್ಹಾ ಹೊಂದಿದ್ದರು. ವಿಜಯ್ ಡಿಕುನ್ನರವರ ತಂದೆ ವಲೇರಿಯನ್ ಡಿಕುನ್ನ ಅವರು ಪೈಲೆಟ್ ಆಗಿದ್ದರು. ನಿವೃತ್ತರಾದ ಬಳಿಕ ಉದ್ಯಮ ನಡೆಸಿದವರು. ತಾಯಿ ಪ್ರೆಸಿಲ್ಲಾ ಡಿಕುನ್ನ ಅವರು ಬೆಳ್ತಂಗಡಿ ಕೋರ್ಟ್‌ನಲ್ಲಿ ಶಿರಸ್ತೆದಾರ್ ಆಗಿ ಸೇವೆ ಸಲ್ಲಿಸಿದವರು. ವಲೇರಿಯನ್ ಡಿ ಕುನ್ಹರವರು ವೃತ್ತಿಯಿಂದ ನಿವೃತ್ತರಾದ ಬಳಿಕ 1950ರಲ್ಲಿ ಲಾರಿ ಟ್ರಾನ್ಸ್‌ಪೋರ್ಟ್ ಮತ್ತು ಹೋಟೆಲ್ ಉದ್ಯಮ ಪ್ರಾರಂಭಿಸಿ ಜನ ಮನ್ನಣೆ ಗಳಿಸಿದರು. ವಿಜಯ್‌ಯವರು ಮಸ್ಕತ್‌ನಲ್ಲಿ ಉದ್ಯಮ ನಡೆಸುತ್ತಿದ್ದರೂ ನಮ್ಮ ಊರಿನ ಜನರಿಗೆ ಏನಾದರೂ ಸೇವೆ ಮಾಡುವ ಹಂಬಲದಿಂದ ಇದೀಗ ರೇಸ್ ಇನ್ ಬೋಡಿಂಗ್ ಮತ್ತು ಲಾಡ್ಜಿಂಗ್ ಆರಂಭಿಸಿದ್ದಾರೆ. ಮಸ್ಕತ್‌ನಲ್ಲಿರುವ ಹೋಟೆಲ್ ಗೋಲ್ಡನ್ ಓಂಸಿಸ್ ಮತ್ತು ಮಾರ್ಮುಲ್ ಹಾಸ್ಪಿಟಾಲಿಟಿ ಗ್ರೂಪ್‌ನ ಮ್ಯಾನೇಜ್‌ಮೆಂಟ್‌ನ ಭಾಗವಾಗಿರುವುದರಿಂದ ಅಂತರಾಷ್ಟ್ರೀಯ ಮಾನದಂಡಗಳನ್ನು ಆನುವಂಶಿಕವಾಗಿ ಪಡೆದ ಬ್ರ್ಯಾಂಡ್ 14 ಐಷಾರಾಮಿ ಅತಿಥಿ ಕೊಠಡಿಗಳು ಆರಾಮದಾಯಕ ಮತ್ತು ಸುಸಜ್ಜಿತ, ಸೂಕ್ತವಾಗಿದೆ. ತೀರ್ಥಯಾತ್ರೆ ಪ್ರವಾಸಿಗರು, ವ್ಯಾಪಾರ ಪ್ರಯಾಣ ಜೊತೆಗೆ ವಿರಾಮ. ಸಂಪೂರ್ಣ ರೀತಿಯ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಾನ್ಫರೆನ್ಸ್ ಹಾಲ್ ವೆಲ್ಜಿಲ್ ಔತಣಕೂಟಗಳು ಮತ್ತು ಸ್ವಾಗತಗಳು, ರೆಸ್ಟೋರೆಂಟ್, ಬಾರ್, ರೇಸ್ ಇನ್‌ನಲ್ಲಿನ ಉತ್ತಮ ಅನುಭವ ನೀಡಲಿದೆ. ಇಲ್ಲಿನ ರೆಸ್ಟೋರೆಂಟ್ ಪೆಗ್ಸ್‌ನಲ್ಲಿ ರುಚಿಕರವಾದ ಊಟ, ಅಂದವಾದ ಬಾರ್‌ನ ವಾತಾವರಣ ಗ್ರಾಹಕರನ್ನು ಉನ್ನತ ಉತ್ಸಾಹದಲ್ಲಿ ಇರಿಸಲಿದೆ.ಹೋಟೆಲ್ ರೇಸ್ ಇನ್‌ನಲ್ಲಿ ಉತ್ತಮವಾಗಿ ದಿನ ಕಳೆಯಬಹುದು.ಆದ್ದರಿಂದ ತೀರ್ಥಯಾತ್ರೆ, ಸಂತೋಷ ಅಥವಾ ವ್ಯಾಪಾರ, ಹೋಟೆಲ್ ಪಡೆಯಲು ರೇಸ್ ಇನ್ ಗ್ರಾಹಕರನ್ನು ಆಹ್ವಾನಿಸುತ್ತಿದೆ. ಪೆಗ್ಸ್‌ನಲ್ಲಿ ಬಹು-ತಿನಿಸು ರೆಸ್ಟೋರೆಂಟ್‌ನಲ್ಲಿ ಚೈನೀಸ್, ಮೊಘಲೈ ಅಥವಾ ಸಸ್ಯಾಹಾರಿ ಪಾಕಶಾಲೆಯ ಕಾಂಟಿನೆಂಟಲ್ ವ್ಯಾಪಕ ಶ್ರೇಣಿಯಿಂದ ಆಯ್ಕೆ ಮಾಡಬಹುದು. ಒಳಾಂಗಣ ವಿಶಿಷ್ಟವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಹೋಟೆಲ್, ಲಾಡ್ಜ್, ಎ.ಸಿ. ಹಾಲ್ ಉದ್ಘಾಟನೆಗೊಳ್ಳಲಿದೆ.14 ಲಕ್ಸುರಿ ರೂಮ್ಸ್, ಸೂಟ್ ರೂಮ್ಸ್, 400 ಜನರಿಗೆ ಉಪಯುಕ್ತವಾಗುವ ಕಾನ್ಫರೆನ್ಸ್, ಗೆಟ್ ಟು ಗೆದರ್ ಪಾರ್ಟಿ, ಎಂಗೇಜ್‌ಮೆಂಟ್, ಮೆಹಂದಿ, ಮದುವೆ, ಬ್ಯಾಂಕ್ವೆಟ್ ಎ.ಸಿ. ಹಾಲ್ ಗ್ರಾಹಕರನ್ನು ಸಂತೃಪ್ತಿಗೊಳಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಡಿ.19ರಂದು ಶುಭಾರಂಭದ ಸಂಭ್ರಮ: ಡಿ.19ರಂದು ಬೆಳಿಗ್ಗೆ 11 ಗಂಟೆಗೆ ಗುರುವಾಯನಕೆರೆಯಲ್ಲಿ ಶುಭಾರಂಭಗೊಳ್ಳಲಿರುವ ಹೋಟೇಲ್ ರೇಸ್ ಇನ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಧರ್ಮಗುರು ಫಾ.ವಾಲ್ಟರ್ ಡಿಮೆಲ್ಲೋ ಉದ್ಘಾಟನೆ ನೆರವೇರಿಸಲಿದ್ದಾರೆ.ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಫಾ. ಸ್ಟ್ಯಾನಿ ಗೋವಿಯಸ್ ಆಶೀರ್ವಚನ ನೀಡಲಿದ್ದಾರೆ.ಹೋಲಿ ರಿಡೀಮರ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಪ್ರಾಂಶುಪಾಲ ಫಾ.ಕ್ಲಿಫರ್ಡ್ ಪಿಂಟೋ ಗೌರವ ಉಪಸ್ಥಿತಿ ಇರಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ. ವಸಂತ ಬಂಗೇರ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಕುವೆಟ್ಟು ಗ್ರಾ.ಪಂ. ಅಧ್ಯಜ್ಷೆ ಭಾರತಿ ಎಸ್.ಶೆಟ್ಟಿ ಮತ್ತು ಬಿಲ್ಡರ್ ಅಶ್ವಿನ್ ಪಿರೇರಾ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

p>

LEAVE A REPLY

Please enter your comment!
Please enter your name here