ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಇದರ ವ್ಯಾಪ್ತಿಗೊಳಪಟ್ಟ ಕುತ್ಲೂರು ಕಾರ್ಯಕ್ಷೇತ್ರದ ಬಿ ಒಕ್ಕೂಟ ತ್ರೈಮಾಸಿಕ ಸಭೆಯು ನಡೆಯಿತು.
ಈ ಸಭೆಯಲ್ಲಿ ಮಾತನಾಡಿದ ಕೃಷಿ ಮೇಲ್ವಿಚಾರಕ ಕೃಷ್ಣ ಗೌಡ ರವರು, ಡ್ರೆಗನ್ ಹಣ್ಣು ಕೃಷಿಯ ಬಗ್ಗೆ ಮಾಹಿತಿ ನೀಡಿದರು.1 ಎಕ್ರೆಗೆ 450 ಕಂಬಕ್ಕೆ 1800 ಗಿಡ ನಾಟಿ ಮಾಡಬಹುದು.
ಬಿಳಿ, ಪಿಂಕ್ ಗುಲಾಬಿ ಹಣ್ಣಿನ ಸಸಿ ನೆಟ್ಟು 9ರಿಂದ 12 ತಿಂಗಳ ಬಳಿಕ ಇಳುವರಿ ಪಡೆಯಬಹುದು.ಮಾರುಕಟ್ಟೆಯಲ್ಲಿ 1kg ಗೆ ಸರಾಸರಿಯಾಗಿ 130ರಿಂದ 200 ರೂ ವರೆಗೂ ಇರುತ್ತದೆ.ರೈತರು ಇಂತಹಾ ಹೊಸ ಕೃಷಿಯ ಬಗ್ಗೆ ಹೆಚ್ಚಿನ ಆಶಕ್ತಿ ಹೊಂದಬೇಕು.ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯಗಳಿಸಬಹುದು ಎಂದರು.ಮಹಿಳೆಯರು ಬಿಡುವಿನ ಸಮಯದಲ್ಲಿ ಮನೆಯ ಸುತ್ತ ತರಕಾರಿ ಕೃಷಿ ಮಾಡಬಹುದು ಎಂದೂ ಅವರು ಪ್ರೇರೇಪಣೆ ನೀಡಿದರು.
ಅಲ್ಲದೆ ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಫಲಾನುಭವಿಗಳಿಗೆ ವಿವಿಧ ಜಾತಿಯ ತರಕಾರಿ ಬೀಜವನ್ನು ವಿತರಣೆ ಮಾಡಲಾಯಿತು.ಈ ವೇಳೆ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಅಣ್ಣಿ ಎಂ ಕೆ, ಕೃಷಿ ತರಬೇತಿ ಮೇಲ್ವಿಚಾರಕ ಸೋಮೇಶ್, ಸೇವಾಪ್ರತಿನಿಧಿ ಕೇಶವ ಪೂಜಾರಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.