ಮಡಂತ್ಯಾರು: ಶಾಲೆಯ ಪಾಠದ ಜೊತೆಗೆ ವ್ಯಕ್ತಿತ್ವ ವಿಕಸನ ಅಗತ್ಯ.ಆತ್ಮವಿಶ್ವಾಸದ ಕೊರತೆಯಿಂದಾಗಿ ಇಂದು ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿ, ಭವಿಷ್ಯದ ಬಗ್ಗೆ ಕಲ್ಪನೆಗಳಿಲ್ಲದಿರುವುದು ಸಾಮಾನ್ಯವಾಗಿದೆ.ಪ್ರಬಲವಾದ ಇಚ್ಛಾಶಕ್ತಿಯಿಂದ ಯಶಸ್ಸು ಸಾಧ್ಯ.ಯಾವ ಕೆಲಸವನ್ನು ಶ್ರದ್ಧಾ ಮನಸ್ಸಿನಿಂದ ಪರಿಪೂರ್ಣವಾಗಿ ಮಾಡುತ್ತೇವೋ ಅವಾಗ ಜೀವನದಲ್ಲಿ ಉನ್ನತಿಗೆ ಏರಬಹುದಾಗಿದೆ ಎಂದು ತುಂಬೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್ ಗಂಗಾಧರ ಆಳ್ವ ಹೇಳಿದರು.
ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸವಾಲನ್ನು ಮೆಟ್ಟಿ ನಿಂತು ಮುಂದೆ ಸಾಗುವನು ಜೀವನದಲ್ಲಿ ಸಫಲನಾಗುತ್ತಾನೆ.ಶಾಲೆಯ ಪರೀಕ್ಷೆಯ ಜೊತೆಗೆ ಜೀವನದ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಜೊತೆ ಕಾರ್ಯದರ್ಶಿ ವಂ|ಡಾ|ಸ್ಟ್ಯಾನಿ ಗೋವಿಯಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಸ್, ಅಣ್ಣಿಗೇರಿ ಶ್ರೀ ಶಾರದ ಪಬ್ಲಿಕ್ ಸ್ಕೂಲ್ ನ ನಿರ್ದೇಶಕಿ ಗ್ರೇಸ್ ನೊರೊನ್ಹಾ ಗೌರವ ಅತಿಥಿಗಳಾಗಿ ಪಾಲ್ಗೊಂಡರು.
ಸೇಕ್ರೆಡ್ ಹಾರ್ಟ್ ಪ್ರೌಢ ಶಾಲಾ ಹಾಗೂ ಕಾಲೇಜು ವಿಭಾಗದ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷರಾದ ವಿನೋದ್ ರಾಕೇಶ್ ಡಿಸೋಜ, ಲಿಯೋ ರೊಡ್ರಿಗಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ,
ಪ್ರೌಢಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೆಕ್ಸಿನ್ ಪಿಂಟೊ, ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಲೀಟಾ ಲೋಬೊ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಜೆರೊಮ್ ಡಿಸೋಜ ವಾರ್ಷಿಕ ವರದಿ ವಾಚಿಸಿದರು.ಸೇಕ್ರೆಡ್ ಹಾರ್ಟ್ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮೋಹನ್ ನಾಯಕ್ ಸ್ವಾಗತಿಸಿದರು.ಉಪನ್ಯಾಸಕ ಸೂರಜ್ ಚಾರ್ಲ್ಸ್ ಸಂಸ್ಥಾಪಕರಾದ ದಿ. ವಂ| ಲಿಗೋರಿ ಡಿಸೋಜ ರವರಿಗೆ ನುಡಿನಮನ ಸಲ್ಲಿಸಿದರು.ಶಿಕ್ಷಕಿ ಶಾಂತಿ ಮೇರಿ ಡಿಸೋಜ ವಂದಿಸಿದರು.
ಉಪನ್ಯಾಸಕರಾದ ಸುಚಿತ್ರ ಕಲಾ ಶೆಟ್ಟಿ ಹಾಗೂ ಫ್ರೀಡಾ ಜ್ಯೋತಿ ವೇಗಸ್ ಕಾರ್ಯಕ್ರಮ ನಿರೂಪಿಸಿದರು.