ಕೊಯ್ಯೂರು ಸರಕಾರಿ ಪ್ರೌಢಶಾಲಾ ರಜತ ಮಹೋತ್ಸವ ಉದ್ಘಾಟನೆ

0

ಕೊಯ್ಯೂರು: ಸರ್ಕಾರಿ ಪ್ರೌಢಶಾಲೆ ಕೊಯ್ಯೂರು ಶಾಲಾ ರಜತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ಗುರುವಂದನೆ ಪ್ರತಿಭಾ ಪುರಸ್ಕಾರ ಡಿ.9ರಂದು ಶಾಲಾ ಆವರಣದಲ್ಲಿದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ ವಹಿಸಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಕೊಯ್ಯೂರು ಪ.ಪೂ ಕಾಲೇಜು ಪ್ರಾಚಾರ್ಯ ಮೋಹನ ಗೌಡ, ಹಾಸನ ಉಪ ಅಂಚೆ ಕಚೇರಿಯ ಖಜಾಂಜಿ ಉಮೇಶ್ ಕೆ., ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರಚಂಡಭಾನು ಭಟ್, ಸಂಚಾಲಕ ಬಾಲಕೃಷ್ಣ ಪೂಜಾರಿ ಬಜೆ, ಗೌರವ ಅಧ್ಯಕ್ಷ ಅಶೋಕ್ ಭಟ್ ಅಗ್ರಶಾಲೆ, ಕಾರ್ಯದರ್ಶಿ ದಾಮೋದರ ಗೌಡ ಬೆರ್ಕೆ, ಕೋಶಾಧಿಕಾರಿ ಮಹಮ್ಮದ್ ಹಾರೂನ್, ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ, ಕೊಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಗೌಡ ಬಜಿಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯತೀಶ್ ದಡ್ಡು, ವಿದ್ಯಾರ್ಥಿ ನಾಯಕ ಪೂರ್ಣೇಶ್, ಸ್ವಸ್ತಿ ವಚನ ಮಾಡುವ ಪೂಂಜಾಲಕಟ್ಟೆ ಸ.ಪ.ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರು ಡಾ.ಶೈಲೇಶ್ ಕುಮಾರ್ ಡಿ.ಎಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೌಢಶಾಲೆ ಮಂಜೂರುಗೊಳಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ, ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಪ್ರಚಂಡ ಭಾನು ಭಟ್, ಧರ್ಣಪ್ಪ ಗೌಡ ಹಲಕ್ಕಿ, ಬಾಲಕೃಷ್ಣ ಭಟ್, ಅನಂತ ಕೃಷ್ಣ ಭಟ್, ಉಮೇಶ್ ಶಿಕ್ಷಕರನ್ನು ಗೌರವಿಸಲಾಯಿತು.

ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಕುಮಾರ್ ಮಾವಿನಕಟ್ಟೆ ಸ್ವಾಗತಿಸಿದರು.ಶಿಕ್ಷಕ ರಾಮಚಂದ್ರ ದೊಡ್ಡಮನಿ ನಿರೂಪಿಸಿದರು.ಸಮಿತಿಯ ಪದಾಧಿಕಾರಿಗಳು, ಹಿರಿಯ ಶಿಕ್ಷಕಿ ಬೇಬಿ, ಶಿಕ್ಷಕ ವೃಂದ, ಊರವರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಪೋಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

ಬಳಿಕ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ನಡೆಯಿತು.

ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದು, ಆಶಯ ಭಾಷಣವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ|ಎಂ.ಮೋಹನ್ ಆಳ್ವ ಮಾಡಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂಚೆ ಮತ್ತು ಪ್ರದರ್ಶನ ನಡೆಯಲಿದೆ.ಸಂಜೆ ಆಳ್ವಾಸ್ ಸಾಂಸ್ಕೃತಿಕ ವೈಭವ 300 ಕಲಾವಿದರಿಂದ ಮೂರು ನೃತ್ಯ ಗಂಟೆಗಳ ಕಾಲ ನೃತ್ಯ ವೈವಿದ್ಯ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.

p>

LEAVE A REPLY

Please enter your comment!
Please enter your name here