ಉಜಿರೆ: ಡಿ.5ರಂದು ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ, (ಸಿ.ಬಿ.ಎಸ್.ಇ) ಉಜಿರೆ ವಿದ್ಯಾರ್ಥಿಗಳಿಗೆ “ಸ್ಫೂರ್ತಿದಾಯಕ ವ್ಯಕ್ತಿತ್ವ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಲಿಮ್ಕಾ ಬುಕ್ ಆಫ್ ರೆಕಾರ್ಡ್, ಮಲ್ಟಿಪಲ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಮಲ್ಟಿಪಲ್ ಏಶಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಒಂಭತ್ತಕ್ಕೂ ಹೆಚ್ಚು ದಾಖಲೆಗಳಿಗೆ ಭಾಜನವಾಗಿರುವ ಮುಂಬೈನ ಎಮ್.ಸಿ ಕಾಲೇಜು ಪ್ರಥಮ ಪದವಿ ವಿದ್ಯಾರ್ಥಿ ಅಫ್ಫಾನ್ ಕುಟ್ಟಿ “ಕಠಿಣ ಪರಿಶ್ರಮ, ಸ್ಥಿರತೆ, ನಿರಂತರತೆ ಯಾವತ್ತಿಗೂ ಪ್ರತಿಫಲ ನೀಡುತ್ತದೆ. ನಿರಂತರ ಪರಿಶ್ರಮವೇ ಸಾಧನೆಯ ಗುಟ್ಟು.” ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳಿಗೆ ರೂಬಿಕ್ಸ್ ಕ್ಯೂಬ್ ನ ಮಾಹಿತಿ ಹಾಗೂ ಸಲಹೆಗಳನ್ನು ನೀಡುತ್ತಾ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯ ಚಿತ್ರವನ್ನು ರೂಬಿಕ್ಸ್ ಕ್ಯೂಬ್ ನ ಸಹಾಯದಿಂದ ಮಾಡಲಾಯಿತು.
ವೇದಿಕೆಯಲ್ಲಿ ಶಾಲೆ ಮುಖ್ಯೋಪಾಧ್ಯಾಯರಾದ ಮನಮೋಹನ್ ನಾಯಕ್ ಕೆ. ಜಿ ಹಾಗೂ ಅಫ್ಫಾನ್ ಕುಟ್ಟಿಯ ತಂದೆ ಬಿಜು ಕುಟ್ಟಿ ಉಪಸ್ಥಿತರಿದ್ದರು.ಶಿಕ್ಷಕಿ ಕಲ್ಯಾಣಿ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.