ಕುತ್ಲೂರು ಸ.ಉ ಶಾಲಾ ತೋಟದ ಲೋಕಾರ್ಪಣೆ-ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯ-ಹರೇಕಳ ಹಾಜಬ್ಬ

0

ಕುತ್ಲೂರು: ಬೆಳ್ತಂಗಡಿ ತಾಲೂಕಿನ ಕುತ್ಲೂರು ಉನ್ನತೀಕರಿಸಿದ ಸರಕಾರಿ ಶಾಲೆಯ ತೋಟವನ್ನು ಲೋಕಾರ್ಪಣೆ ಡಿ.2ರಂದು ಮಾಡಲಾಯಿತು.ಕುತ್ಲೂರು ಸರಕಾರಿ ಶಾಲೆಯ ಅಭಿವೃದ್ಧಿ ನೋಡಿ ಅತ್ಯಂತ ಹೆಚ್ಚು ಖುಷಿ ಪಟ್ಟಿರುವುದಾಗಿ ಪದ್ಮಶ್ರೀ ವಿಜೇತ ಹರೇಕಳ ಹಾಜಬ್ಬ ತಿಳಿಸಿದರು.

ಶಾಲಾ ತೋಟದ ಉದ್ಘಾಟನೆ ಸಮಾರಂಭದಲ್ಲಿ ನಾರಾವಿ ಅಧ್ಯಕ್ಷ ರಾಜ ವರ್ಮ ಜೈನ್ ಅಧ್ಯಕ್ಷ ತೆ ವಹಿಸಿದ್ದರು.ಧರ್ಮಸ್ಥಳದ ಧರ್ಮೋಥ್ಥಾನ ಟ್ರಸ್ಟ್ ನ ಕಾರ್ಯದರ್ಶಿ ವೀರು ಶೆಟ್ಟಿ, ದ.ಕ ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಜೈನ್, ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯಕ ಯೋಜನಾಧಿಕಾರಿ ಆನಂದ ಸುವರ್ಣ, ಇತರ ಅತಿಥಿ ಗಳಾದ ಜೀವಂಧರ ಕುಮಾರ್, ಸತೀಶ್ ಪಡಿವಾಳ್, ಕೃಷ್ಣ ಪ್ಪ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಮುಖ್ಯೋಪಾಧ್ಯಾಯರಾದ ರೂಪ ಕುಮಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿ ಕಾರಿ ಪುಷ್ಪ ರಾಜ್ ಬಿ.ಎನ್,ಉಪಾಧ್ಯಕ್ಷ ಭಾಸ್ಕರ ರೈ ಕೆ, ಪತ್ರಕರ್ತ ಧನಕೀರ್ತಿ ಅರಿಗ, ಎಸ್ ಡಿಎಂಸಿ ಉಪಾಧ್ಯಕ್ಷ ರಾದ ಜ್ಯೋತಿ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಮಿತ್ ಜೈನ್ ಉಪಸ್ಥಿತರಿದ್ದರು.

ಎಸ್ ಡಿಎಂ ಸಿ ಅಧ್ಯಕ್ಷ ರಾಮಚಂದ್ರ ಭಟ್ ಸ್ವಾಗತಿಸಿದರು.ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ಅನಿತಾ ವಂದಿಸಿದರು.ಇದೇ ಸಂದರ್ಭದಲ್ಲಿ ಶಾಲಾ ವಾರ್ಷಿಕೊತ್ಸವ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

p>

LEAVE A REPLY

Please enter your comment!
Please enter your name here