ಕೊಯ್ಯೂರು : ಸರಕಾರಿ ಪ್ರೌಢಶಾಲೆಯಲ್ಲಿ ನ.26ರಂದು ಶಾಲಾ ರಜತ ಮಹೋತ್ಸಹ ಆಚರಣೆಯ ಕಾರ್ಯಕ್ರಮದ ಆಮಂತ್ರಣಾ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.
ಕೊಯ್ಯೂರು ಗ್ರಾಮದ ಹಿರಿಯರಾದ ಶಂಕರ ಮಯ್ಯ ಫಲಸದ ಕೋಡಿ ಮಾಜಿ ಎಸ್.ಡಿ.ಎಂ.ಸಿ, ಅಧ್ಯಕ್ಷರು, ಸರಕಾರಿ ಪ್ರೌಢಶಾಲೆ ಕೊಯ್ಯೂರು ಇವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಬಳಿಕ ಮಾತಾಡಿ ಕೊಯ್ಯೂರು ಪ್ರೌಢಶಾಲೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ವ್ಯಾಪಕವಾದ ಬದಲಾವಣೆ ಕಂಡಿದೆ. ಸುಂದರ ಪರಿಸರದಲ್ಲಿರುವ ಶಾಲೆಯಲ್ಲಿ ಎಲ್ಲಾ ತರದ ಕಲಿಕಾವಾತಾವರಣವಿದೆ. ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕೆಂ ದರು ಮತ್ತು ಡಿ.9ರಂದು ನಡೆಯುವ ರಜತಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸುವುದರೊಂದಿಗೆ ಶಾಲೆಯ ಅಭಿವೃದ್ದಿಯಲ್ಲಿ ಕೈಜೋಡಿಸಬೇಕೆಂದರು.
ಬಜಿಲದ ಜೆನರಲ್ ಮರ್ಚೆಂಟ್ ಶ್ರೀ ಕೂಸಪ್ಪ ಪೂಜಾರಿ ರಶೀತಿ ಪುಸ್ತಕ ಬಿಡುಗಡೆಗೊಳಿಸಿ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾ ದರೆ ಆರ್ಥಿಕ ಸಂಪತ್ತು ಬಹಳ ಅಗತ್ಯ ಹಾಗಾಗಿ ಈ ಶಾಲೆಯಲ್ಲಿ ವಿದ್ಯಾರ್ಜನೆಮಾಡಿ ಸಂಪಾಧನೆ ಮಾಡುತ್ತಿರುವ ಹಿರಿಯ ವಿದ್ಯಾರ್ಥಿಗಳು ಶಾಲೆಯಲ್ಲಿ ನೆಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಚಂಢ ಭಾನು ಭಟ್ ಪಾಂಬೇಲು ಅಧ್ಯಕ್ಷರು ರಜತ ಮಹೋತ್ಸವ ಸಮಿತಿ ವಹಿಸಿದ್ದರು.ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ ಪ್ರಸ್ತಾಪನೆ ಮಾಡಿದರು.ಶಾಲೆಯು ಜ.19.1994ರಂದು ಸರಕಾರದಿಂದ ಮಂಜೂರುಗೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ಇಲ್ಲಿ ಪ್ರಾರಂಭಗೊಂಡಿತು.1997ರಲ್ಲಿ ಸ್ವಂತ ಕಟ್ಟಡ ಹೊಂದಿದ ಶಾಲೆ ಇಂದು ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದೆ.ಉತ್ತಮ ಶಾಲಾ ಕಟ್ಟಡ, ತೆರೆದ ಸಭಾಂಗಣ 200 ಮೀಟರ್ ಟ್ರ್ಯಾಕ್ ಮತ್ತು ವೀಕ್ಷಕ ಗ್ಯಾಲರಿ ಹೊಂದಿರುವ , ಕ್ರೀಡಾಂಗಣ, ಪ್ರಯೋಗಾಲಯ, ಸ್ಮಾರ್ಟ್ ತರಗತಿ, ಆರ್ಬೋರೇಟಮ್ ಹೀಗೆ ಹಲವು ವಿಶೇಷಗಳನ್ನು ಹೊಂದಿರುತ್ತದೆ. ಶೈಕ್ಷಣಿಕ ವರ್ಷ2019&20 ರಲ್ಲಿ ನಡೆಯಬೇಕಿದ್ದ ರಜತ ಮಹೋತ್ಸವ ಕಾರ್ಯಕ್ರಮ ಕೊರೊನಾ ಮಹಾಮಾರಿಯಿಂದಾಗಿ ಮುಂದೂಲ್ಪಟ್ಟು ಇದೀಗ ಡಿ.9ರಂದು ನಡೆಯಲಿದೆ.
ಆ ದಿನ ಶಾಲೆಯಲ್ಲಿ ಹಿಂದೆ ಕಲಿಸಿದ ಗುರುಗಳಿಗೆ ಗುರುವಂದನೆ , ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿಗಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.ವಿಶೇಷವಾಗಿ ಆಳ್ವಾಸ್ ವಿದ್ಯಾ ಸಂಸ್ಥೆಯ 300 ಕಲಾವಿದರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ ಎಂದರು. ಹಿರಿಯ ಶಿಕ್ಷಕಿ ಬೇಬಿ ಸ್ವಾಗತಿಸಿದರು. ವೇದಿಕೆಯಲ್ಲಿ ಬಾಲಕೃಷ್ಣ ಪೂಜಾರಿ ಬಜೆ, ಅಶೋಕ್ ಭಟ್ ಅಗ್ರಶಾಲೆ, ಮಹಮ್ಮದ್ ಹಾರೂನ್, ಮೋಹನಗೌಡ, ಪ್ರವೀಣ್ ಕುಮಾರ್ ಮಾವಿನ ಕಟ್ಟೆ, ಗೀತಾ ರಾಮಣ್ಣ ಗೌಡ, ನವೀನ್ ಕುಮಾರ್ ವಾದ್ಯಕೋಡಿ, ಯತೀಶ್ ದಡ್ಡು, ಯಶವಂತ ಗೌಡ ಪೂರ್ಯಾಳ ಪ್ರವೀಣ್ ಕುಮಾರ್ ಎಚ್, ಶೈಲೇಸ್ ಕುಮಾರ್ ಡಿ ಎಚ್, ದಾಮೋ ದರ ಗೌಡ ಬೆರ್ಕೆ, ಚಂದ್ರಶೇಖರ ಕೊರ್ಯಾರ್ ಉಪ ಸ್ಥಿತರಿದ್ದರು. ಸುಧಾಕರ ಶೆಟ್ಟಿ ವಂದಿಸಿದರು, ರಾಮಚಂದ್ರ ದೊಡಮನಿ ನಿರೂಪಿಸಿದರು.