ಗೇರುಕಟ್ಟೆ ಮನ್ಶರ್ ಪಿಯುಸಿ ವಿದ್ಯಾರ್ಥಿಗಳ ಮಾರ್ಕೆಟ್ ಕಲಿಕೆ ಪ್ರಾಯೋಗಿಕ ಪ್ರದರ್ಶನ

0

ಗೇರುಕಟ್ಚೆ: ಕಳಿಯ ಗ್ರಾಮ ಮನ್ಶರ್ ಪಿಯುಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಜೊತೆಯಲ್ಲಿ ವ್ಯಾಪಾರ ವೈವಾಟು (ಮಾರ್ಕೆಟ್) ಎಂಬ ಕಲಿಕೆ ಪ್ರಾಯೋಗಿಕ ಕಾರ್ಯಕ್ರಮ ನ.18 ರಂದು ಮನ್ಶರ್ ಶಿಕ್ಷಣ ಸಂಸ್ಥೆ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಪಠ್ಯಪುಸ್ತಕ ಬೋಧನೆಯಿಂದ ಕಲಿತರೆ ಅದು ಅರ್ಥ ಪೂರ್ಣವಾಗುವುದು ಎಂಬ ಉದ್ದೇಶದಿಂದ ಮನ್ಶರ್ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ತಂಡವು ಪ್ರಾಯೋಗಿಕವಾಗಿ ನಡೆಸಿ ಯಶಸ್ವಿ ಪ್ರದರ್ಶನ ನೀಡಿದರು.

ಸಂಸ್ಥೆಯ ಎಲ್ಲಾ ವಿದ್ಯಾರ್ಥಿ ಪೋಷಕರು ಈ ಪ್ರಾಯೋಗಿಕ ಮಾರುಕಟ್ಟೆ ವೇದಿಕೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಉಮರ್ ಅಸ್ಸಖಾಫ್ ತಂಙಲ್ ಅವರ ದಿವ್ಯಹಸ್ತದಿಂದ ಎಮ್.ಎಮ್.ಎಮ್ [ಮನ್ಶರ್ ಮಾರ್ಕೆಟಿಂಗ್ ಮಗ್ನೆಟ್] ನಾಮಫಲಕವನ್ನು ಅನಾವರಣಗೊಳಿಸಿ ಚಾಲನೆ ನೀಡಿ ಮಾತನಾಡುತ್ತಾ, ಮಾರ್ಕೆಟ್ ವಿಧಾನ ಸಂಪೂರ್ಣ ಸವಿವರಗಳ ಬಗ್ಗೆ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನಮುಟ್ಟುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಅಹ್ಮದ್ ಮೋನು ಏರುಕಡಪ್ಪು, ವಿದ್ಯಾ ಸಂಸ್ಥೆಯ ಟ್ರಸ್ಟಿ ಹಾಗೂ ಅರಬಿಕ್ ವಿಭಾಗದ ಅಬ್ದುಲ್ಲಾ ಸಖಾಫಿ ನಿಂತಿಕಲ್ಲು, ಸಂಸ್ಥೆಯ ಆಡಳಿತಾಧಿಕಾರಿಯಾದ ರಶೀದ್ ಕುಪ್ಪೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಸ್ಥೆಯ ಜನರಲ್ ಮೇನೇಜರ್ ಹೈದರ್ ಮರ್ದಾಲ ನೇತೃತ್ವದ ಮಾರ್ಗದರ್ಶನದಲ್ಲಿ ಜರುಗಿತು.

“ದಿ ಮೂವಿಂಗ್ ರಾಕ್ಸ್” ಹಾಗೂ “ಟೀಮ್ ಮ್ಯಾಪ್ಸ್” ಎಂಬ ಎರಡು ವಿದ್ಯಾರ್ಥಿಗಳ ತಂಡದ ಮಾರ್ಕೆಟ್ ಗಳನ್ನು ಒಳಗೊಂಡಿದ್ದು ಆಸ್ವಾದಕರ ತಿಂಡಿ ತಿನಿಸು, ಮಕ್ಕಳ ಆಟಿಕೆ ವಸ್ತುಗಳ ವ್ಯಾಪಾರವು ನಡೆಯಿತು.
ಸಮಾರೋಪ ಕಾರ್ಯಕ್ರಮದ ವೇದಿಕೆಯಲ್ಲಿ ದಿ ಮೂವಿಂಗ್ ರಾಕ್ಸ್ ತಂಡದ ಶುಚಿತ್ವ, ಕ್ರಮ ಪ್ರಕಾರ ಜೋಡಣೆ, ಸಹಕಾರ ಮನೋಭಾವನೆ, ಚತುರತೆ, ಲಾಭಗಳಿಕೆಯ ಬುದ್ಧಿಮತ್ತೆ ಎಲ್ಲವನ್ನು ಗಮನಿಸಿದ ಗಣ್ಯರು ಹಾಗೂ ಪೋಷಕ ಮಿತ್ರರ ಅನಿಸಿಕೆ ಮತ್ತು ಮೆಚ್ಚುಗೆ ಹಾಗೂ ಅಂಕಗಳ ಆಧಾರದಿಂದ ಪ್ರಥಮ ಬಹುಮಾನ ಪಡೆದು ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಮನ್ಶರ್ ಸಂಸ್ಥೆಯ ಆಡಳಿತ ನಿರ್ದೇಶಕ ಸಯ್ಯದ್ ಉಮ್ಮರ್ ಅಸ್ಸಕಾಫ್ ಹಾಗೂ ಕಳಿಯ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಕರೀಂ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

ಈ ಕಾರ್ಯಕ್ರಮದ ಪ್ರಸ್ತಾವಿಕ ಮಾತುಗಳನ್ನು ಮನ್ಶರ್ ವಿದ್ಯಾಸಂಸ್ಥೆಯ ಪಿಯುಸಿ ವಿಭಾಗದ ಪ್ರಾಂಶುಪಾಲರಾದ ಕೌಸರ್ ಪಲ್ಲಾದೆ ಮಾಡಿದರು.ಸ್ವಾಗತ ಪಿಯುಸಿ ವಿಜ್ಞಾನ ವಿಭಾಗದ ಉಪನ್ಯಾಸಕ ಅನುಷಾ ಜೈನ್ ನೆರವೇರಿಸಿದರು.ವಿಜೇತರ ಹೆಸರನ್ನು ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಮಹಮ್ಮದ್ ತೌಫಿಕ್ ವಾಚಿಸಿದರು.

ಗುರುವಾಯನಕೆರೆ ಅರಫ ಪರ್ನಿಸರ್ ಸಂಸ್ಥೆ ಮಾಲಕ ನಜೀರ್, ಸುದ್ದಿ ಬಿಡುಗಡೆ ಪತ್ರಿಕೆ ಹಿರಿಯ ವಿತರಕ ಹಸೈನರ್ ಗೇರುಕಟ್ಟೆ, ಉದ್ಯಮಿ ರವೂಫ್ ಗೇರುಕಟ್ಟೆ, ಸ್ಥಳೀಯ ಹಮೀದ್, ವಿಧ್ಯಾ ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿಗಳು, ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ಪ್ಯಾರಮೆಡಿಕಲ್ ವಿಭಾಗದ ಉಪನ್ಯಾಸಕ ಗೌತಮಿ ಶರಣ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here