


ತೆಕ್ಕಾರು: ತೆಕ್ಕಾರು ಗ್ರಾಮ ವ್ಯಾಪ್ತಿಯ ಕೂಟೇಲು, ಪಿಂಡಿಕಲ್ಲು, ಬಾಜರು ಕೊಡಿಬೆಟ್ಟು ತೆಕ್ಕಾರು ಸೊಸೈಟಿ ಹಾಗೂ ತೆಕ್ಕಾರು ವ್ಯಾಪ್ತಿಯಲ್ಲಿ ಏರ್ಟೆಲ್ ನೆಟ್ವರ್ಕ್ ಸಮಸ್ಯೆಯಿಂದ ಗ್ರಾಹಕರು ಬೇಸತ್ತಿದ್ದಾರೆ.


ಕಳೆದ ಅದೆಷ್ಟೋ ಸಮಯದಿಂದ ನೆಟ್ವರ್ಕ್ ಸಮಸ್ಯೆ ಬಗ್ಗೆ ಏರ್ಟೆಲ್ ಸಂಸ್ಥೆಯ ಸಿಬ್ಬಂದಿಗಳಿಗೆ ತಿಳಿಸಿದ್ದು ಅವರು ಮೂರು ಬಾರಿ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಸರಿಪಡಿಸುವುದಾಗಿ ಆಶ್ವಾಸನೆ ನೀಡಿದ ಸಿಬ್ಬಂದಿಗಳ ಇದುವರೆಗೂ ಪತ್ತೆಯೇ ಇಲ್ಲದ್ದಂತಾಗಿದೆ.ಸಿಬ್ಬಂದಿಗಳಿಗೆ ಸಮಸ್ಯೆಯನ್ನು ತಿಳಿಸಿದರೂ ಅದನ್ನು ಅವರು ಪರಿಗಣಿಸದೆ ಗ್ರಾಹಕರನ್ನು ನೆಟ್ವರ್ಕ್ ಸಮಸ್ಯೆಯಿಂದ ವಂಚಿಸುತ್ತಿದ್ದಾರೆ.ಸೀಮ್ಗೆ ರಿಚಾರ್ಜ್ ಮಾಡಿದರೆ ಅದು ಪ್ರಯೋಜನಕಾರಿ ಆಗಬೇಕೆಂದರೆ ನೆಟ್ವರ್ಕ್ ಬೇಕು.ಅದೇ ಸರಿಯಾಗಿ ಸಿಗುತ್ತಿಲ್ಲ.ಕಂಪನಿಗೆ ಗ್ರಾಹಕರು ಮಾಡಿದ ರಿಚಾರ್ಜ್ ನಿಂದ ಪ್ರಯೋಜನ ಆಗುತ್ತಿದೆ ಹೊರತು ಗ್ರಾಹಕರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


            





