ಗುರುವಾಯನಕೆರೆ: ಮಂಗಳೂರು ವೀಲ್ಸ್ ವತಿಯಿಂದ ಗುರುವಾಯನಕೆರೆಯ ಅಭಯ ಆಸ್ಪತ್ರೆಯ ಬಳಿ ನ.16ರಿಂದ 18 ರವರೆಗೆ ಆಪೆ ಮಹೋತ್ಸವವು ನಡೆಯಲಿದ್ದು ಮಹೋತ್ಸವಕ್ಕೆ ಪ.ಪಂ.ನಿಕಟಪೂರ್ವ ಉಪಾಧ್ಯಕ್ಷ ಜಯಾನಂದ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಬೆಳ್ತಂಗಡಿಯಲ್ಲಿ ಸಾರಥಿಗಳ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಗರದಲ್ಲಿ ರಿಕ್ಷಾ ಅಧಿಕವಾಗಿದೆ.ದೋಸೆ ಹಬ್ಬದ ಬಳಿಕ ಬೆಳ್ತಂಗಡಿಯಲ್ಲಿ ಆಪೆ ಮಹೋತ್ಸವ ನಡೆಯುತ್ತಿದ್ದು ಸಂಭ್ರಮ ಮರೆಚದಂತಾಗಿದೆ.ಇತ್ತಿಚೀನ ದಿನಗಳಲ್ಲಿ ಮಹಿಳೆಯರು ಆಟೋ ಓಡಿಸುತ್ತಿದ್ದು ಜೀವನವನ್ನು ಕಲ್ಪಿಸಿಕೊಂಡಿದ್ದಾರೆ.ಇಂದು ಒಂದೇ ಸೂರಿನಲ್ಲಿ ಸೌಲಭ್ಯಗಳು ಕೂಡ ದೊರೆಯುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕು ಆಟೋ ರಿಕ್ಷಾ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ದುರ್ಗಾ ಆಟೋ ವರ್ಕ್ಸ್ ನ ಮಾಲಕ ವಿಶ್ವನಾಥ, ವಲಯ ಸರ್ವಿಸ್ ಮ್ಯಾನೇಜರ್ ರಾಘವೇಂದ್ರ, ವಿಷ್ಣು ಆಟೋ ವರ್ಕ್ಸ್ ನ ಲೋಕೇಶ್ ಹಾಗೂ ಸಂಸ್ಥೆಯ ಮಾಲಕ ಮುಖೇಶ್ ಮಲ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೆ.ಸಿ.ಹರಿಶ್ಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.ಗ್ರಾಹಕರಿಗೆ ಕೀ ವಿತರಿಸಲಾಯಿತು.
ಮಹೋತ್ಸವದಲ್ಲಿ ಎನಿದೆ: ಮಹೋತ್ಸವದಲ್ಲಿ ಉಚಿತ ವಾಹನ ತಪಾಸಣೆ, ಬಿಡಿಭಾಗಗಳ ಕೊಂಬೊ ಆಫರ್, ಬಿಡಿಭಾಗಗಳ ಮೇಲೆ ವಿಶೇಷ ರಿಯಾಯಿತಿ, ಲೇಬರ್‌ನ ಮೇಲೆ ವಿಶೇಷ ರಿಯಾಯಿತಿ, ಮೇಜರ್ ವರ್ಕ್ಸ್ ಗೆ ವಿಶೇಷ ರಿಯಾಯಿತಿ, ಎಂಜಿನ್ ಆಯಿಲ್ ಬದಲಿಸಿದರೆ ಫಿಲ್ಟರ್ ಫ್ರೀ, ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.ಅಷ್ಟೇ ಅಲ್ಲದೇ 0 ಮೆಂಟೇನೇನ್ಸ್, 0 ಡೌನ್ ಪೇಮೆಂಟ್, ಉಚಿತ ಸ್ಮಾರ್ಟ್ ಫೋನ್, ಎಕ್ಸ್‌ಚೇಂಜ್ ಮೇಳ, ಫೈನಾನ್ಸ್ ಮೇಳ, ಟೆಸ್ಟ್ ಡ್ರೈವ್ ನಡೆಯಲಿದೆ ಹಾಗೂ ಸರ್ವೀಸ್ ಕೂಪನ್ ನಲ್ಲಿ ಲಕ್ಕೀ ಡ್ರಾದಲ್ಲಿ ಬಹುಮಾನಗಳನನ್ನು ಗೆಲ್ಲುವ ಸುವರ್ಣಾವಕಾಶವು ಇದೆ.