ಉಜಿರೆ: ಉಜಿರೆಯ ಕಾಲೇಜು ರಸ್ತೆಯ ಕೃಷ್ಣ ಸಂಪಿಗೆ ಕಟ್ಟಡದಲ್ಲಿ ನ.5ರಂದು ಶ್ರೀ ಗೌರಿ ಫ್ಯಾಷನ್ ಮತ್ತು ಟೈಲರಿಂಗ್ ಮೆಟೀರಿಯಲ್ಸ್ ಉದ್ಯಮವು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳರಿಂದ ಗಣಪತಿ ಹವನ ಧಾರ್ಮಿಕ ವಿಧಿಯೊಂದಿಗೆ ಶುಭಾರಂಭಗೊಂಡಿತು.
ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಆಗಮಿಸಿ ನೂತನ ಉದ್ಯಮಕ್ಕೆ ಉತ್ತರೋತ್ತರ ಅಭಿವೃದ್ಧಿ ಹಾಗೂ ಯಶಸ್ಸು ಹಾರೈಸಿ ಶುಭಕೋರಿದರು.
ಉಜಿರೆ ಗ್ರಾ.ಪಂ.ಅಧ್ಯಕ್ಷೆ ಉಷಾ ಕಾರಂತ್, ಚಿದಾನಂದ ಮತ್ತು ಮನೆಯವರು ಆಗಮಿಸಿ ಶುಭ ಹಾರೈಸಿದರು.
ನೂತನ ಉದ್ಯಮದಲ್ಲಿ ರುಡ್‌ಸೆಟ್‌ನಲ್ಲಿ ತರಬೇತಿ ಪಡೆದ ನುರಿತ ಶಿಕ್ಷಕಿಯರಿಂದ ಎಂಬ್ರಾಡರಿ ಮತ್ತು ಟೈಲರಿಂಗ್ ತರಬೇತಿ ನೀಡಲಾಗುತಿದ್ದು, ಎಲ್ಲ ಅತ್ಯಾಧುನಿಕ ಹಾಗೂ ವಿನ್ಯಾಸದ ಟೈಲರಿಂಗ್ ಮೆಟೀರಿಯಲ್‌ಗಳು ಮಿತದರದಲ್ಲಿ ಲಭ್ಯವಿದ್ದು, ಉದ್ಯಮದ ಮಾಲಕಿ ಸುಮಲತಾ ಸವಣಾಲು ರವರು ಉಜಿರೆಯ ನಾಗರೀಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪೂರ್ಣ ಸಹಕಾರವನ್ನು ಕೋರಿ, ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಕೃತಜ್ಞತೆ ವ್ಯಕ್ತ ಪಡಿಸಿದರು.