ಸೈಂಟ್ ಪೀಟರ್ ಕ್ಲೇವರ್ ಶಾಲಾ ಕ್ರೀಡೋತ್ಸವ

0

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಶಾಲೆಯ ಕ್ರೀಡಾಕೂಟವು ದೈಹಿಕ ಶಿಕ್ಷಣ ಶಿಕ್ಷಕ ಕೇವನ್ ರವರ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿಗಳ ಪಥ ಸಂಚಲನದ ಮೂಲಕ ಆರಂಭವಾಯಿತು.ಶಾಲಾ ಸಂಚಾಲಕರಾದ ವಂದನಿಯ ಫಾದರ್ ಎಲಿಯಸ್ ಡಿಸೋಜ, ಮುಖ್ಯ ಶಿಕ್ಷಕಿ ಸಿಸ್ಟರ್ ಶೀಬಾ ಜೋಸೆಫ್, ಶಾಲಾ ನಾಯಕಿ ಲಿಯಾನ ಪಾಯ್ಸ್, ಶಾಲಾ ಕ್ರೀಡಾ ನಾಯಕ ಸಾತ್ವಿಕ್ ಜೋಷಿ, ಶಾಲಾ ಸಹ ಕ್ರೀಡಾ ನಾಯಕ ಡಿಯೋನ್ ಪ್ರಿನ್ಸ್ ಡಿಸೋಜ ರವರು ದೀಪ ಬೆಳಗಿಸುವುದರ ಮೂಲಕ ಎರಡು ದಿನದ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.

ಶಾಲಾ ಸಂಚಾಲಕರಾದ ವಂ.ಫಾ. ಎಲಿಯಾಸ್ ಡಿ ಸೋಜ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಹಶಿಕ್ಷಕಿ ಪ್ರಮೀಳಾ ಡಿಸೋಜಾ ರವರು ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಕವಿತಾರವರು ವಂದಿಸಿ, ಪ್ರೇಮಾ ರವರು ನಿರೂಪಿಸಿದರು.

LEAVE A REPLY

Please enter your comment!
Please enter your name here