ತಣ್ಣೀರುಪಂತ: ತಣ್ಣೀರುಪಂಥ ಗ್ರಾಮದ ಕಲ್ಲೇರಿಯ ಜನತಾ ಕಲೋನಿ ನಿವಾಸಿ ಸಲೀಂ (45) ಎಂಬುವರು ಮಾನಸಿಕ ಅನಾರೋಗ್ಯದ ನಿಮಿತ್ತ ಕೆಲವು ಸಮಯದಿಂದ ಯಾವುದೇ ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು, ಹಾಗೂ ಮೂರ್ಚೆ ರೋಗದಿಂದ ಬಳಲುತ್ತಿದ್ದರು, ಸಲೀಂ ರವರು ಕೆಲವೊಮ್ಮೆ, ಮನೆಯಿಂದ ಹೊರ ಹೋದವರು 2-3 ದಿನ ಮನೆಗೆ ವಾಪಾಸು ಬಾರದ ಊರಿನಲ್ಲಿಯೇ ವಾಸ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಅ.20 ರಂದು ಬೆಳಿಗೆ 04.00 ಗಂಟೆಗೆ ಸಲೀಂ ರವರು ಮನೆಯಲ್ಲಿ, ಯಾವುದೇ ವಿಚಾರವನ್ನು, ಹೇಳದೆ ಮನೆಯಿಂದ ಹೊರ ಹೋದವರು ವಾಪಾಸು ಮನೆಗೆ ಬಾರದೆ ಇದ್ದವರನ್ನು ಮನೆಯವರು ಹಾಗೂ ಕುಟುಂಬಸ್ಯರು ಊರಿನ ಹಲವು ಕಡೆ ಹುಡುಕಾಡಿ, ಸಂಬಂಧಿಕರಲ್ಲಿ, ವಿಚಾರಿಸಿಕೊಂಡರೆ, ಈ ವರೆಗೆ ಪತ್ತೆಯಾಗದೆ ಇರುವುದರಿಂದ ಅವರ ಪತ್ನಿ ಜಮಿಳ ರವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯ5, 35, 96/2023 ರಂತೆ ಪ್ರಕರಣ ದಾಖಲಾಗಿ ತನಿಖೆ ನಡೆಸುತ್ತಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ,ಹೆಸರು: ಸಲೀಂ(45) ಎತ್ತರ: 5.6 ಅಡಿ, ಸಪೂರ ಶರೀರ, ಎಣೆ, ಕಪ್ಪು ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ಗಡ, ಮಿಸೆಮೈಮೇಲಿ ಕಪ್ಪ. ದಪ್ಪ, ಕೂದಲು, ಹೋಲು ತಲೆ ಹಗೂ ತಲೆಯ ಹಿಂಭಾಗ ಕಪ್ಪ ಕೂದಲು, ಹಣೆಯ ಮೇಲೆ ಹಳೆಯ ಗಾಯ ಹೊಂದಿದ್ದು. ಕನ್ನಡ, ತುಳು,ಬ್ಯಾರಿ ಮಾತನಾಡುತ್ತಾರೆ.ಉಮ್ಮ ಕೈಯ ಕಪ್ಪ ಶರ್ಟು, ನೀಲಿ, ಬಿಳಿ ಚೆಕ್ಗಳಿರುವ ಲುಂಗಿ ಧರಿಸುತ್ತಾರೆ. ವ್ಯಕ್ತಿಯ ಇರುವಿಕೆಯನ್ನು ಕಂಡಲ್ಲಿ ಕೂಡಲೇ ಪುಂಜಾಲಕಟ್ಟೆ ಪೊಲೀಸ್ ಠಾಣೆ (08256- 286375) ಅಥವಾ ದ.ಕ ಜಿಲ್ಲಾ ಕಂಟ್ರೋಲ್ ರೂ(0824-2220500) ಗೆ ಸಂಪರ್ಕಿಸಬಹುದು.