ಬೆಳ್ತಂಗಡಿ: ಆರ್ಗ್ಯಾನಿಕ್ ಬ್ಯಾಗ್ ನಿರ್ಮಿಸಿಕೊಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದಡಿ ಎನ್ವಿಗ್ರೀನ್ ಬಯೋಟೆಕ್ ಸಂಸ್ಥೆಯ ಮಾಲಕರಾದ ಬೆಳ್ತಂಗಡಿ ತಾಲೂಕಿನ ಬಳಂಜ ನಿವಾಸಿ ಅಶ್ವತ್ಥ್ ಹೆಗ್ಡೆಯವರ ವಿರುದ್ಧ ಬೆಂಗಳೂರಿನ ಅಶೋಕ್‌ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
2018ರಲ್ಲಿ ಎನ್ವಿಗ್ರೀನ್ ಬಯೋಟೆಕ್ ಸಂಸ್ಥೆ ಸ್ಥಾಪಿಸಿದ್ದ ಬಳಂಜದ ಅಶ್ವತ್ಥ್ ಹೆಗ್ಡೆಯವರು ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿದ್ದು ತಾನು ತನ್ನ ಸಂಸ್ಥೆಯ ಮೂಲಕ ಆರ್ಗ್ಯಾನಿಕ್ ಬ್ಯಾಗ್ ನಿರ್ಮಿಸಿ ಕೊಡುತ್ತೇನೆ. ಬಿಸಿನೀರಿನಲ್ಲಿ ಕರಗುವ ಯಂತ್ರವನ್ನೂ ಮಾಡಿಕೊಡುತ್ತೇನೆ ಮತ್ತು ಕೆಲಸಕ್ಕೆ ಕಾರ್ಮಿಕರನ್ನು ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಬೆಂಗಳೂರಿನ ನೀಲಿಮಾ ಎಂಬವರು ನೀಡಿದ ದೂರಿನಂತೆ ಅಶ್ವತ್ಥ್ ಹೆಗ್ಡೆ ವಿರುದ್ಧ ಬೆಂಗಳೂರಿನ ಅಶೋಕ್‌ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 406 ಮತ್ತು 420 ಅನ್ವಯ ಕೇಸು ದಾಖಲಾಗಿದೆ.
p>