ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ

0

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವವು ಅತ್ಯಂತ ವಿಜ್ರಂಭಣೆಯಿಂದ ಶಾಲಾ ವಠಾರದಲ್ಲಿ ನಡೆಯಿತು.

ಶಾಲಾ ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊರವರು ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಶಾಲಾ ಮಕ್ಕಳಿಂದ ರಾಷ್ಟಗೀತೆ, ನಾಡಗೀತೆ ಹಾಗೂ ನಾಡು ನುಡಿಯ ಕುರಿತು ವಿವಿಧ ಗೀತೆಗಳನ್ನು ಹಾಡಲಾಯಿತು.

ಕುಮಾರಿ ಶಾರೊನ್ ಡಿ’ಸೋಜ ರವರು ರಾಜ್ಯೋತ್ಸವದ ಮಹತ್ವದ ಕುರಿತು ಮಾತನಾಡಿದಳು. ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಅಭಿನಂದಿಸಿ ರಾಜ್ಯೋತ್ಸವದ ಶುಭಾಶಯವನ್ನು ನೀಡಿದರು.ಪ್ರಭಾಕರ ಶೆಟ್ಟಿಯವರು ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.

ತದನಂತರ ಮಕ್ಕಳಿಗೆ ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಯಿತು.

p>

LEAVE A REPLY

Please enter your comment!
Please enter your name here