ವೇಣೂರು: ಅಂತರ್ಜಲ ಮರುಪೂರಣ ಮಾಹಿತಿ ಮತ್ತು ಪರ್ಯಾಯ ವಿದ್ಯುತ್ ಶಕ್ತಿ ಬಳಕೆ ಮಾಹಿತಿ ಕಾರ್ಯಕ್ರಮವ ವೇಣೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ವೇಣೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವೇಣೂರು ಮತ್ತು ವಿವೇಕನಂದ ಸೇವಾ ಟ್ರಸ್ಟ್ ವೇಣೂರು ಜಂಟಿಯಾಗಿ ನೇತೃತ್ವವನ್ನು ವಹಿಸಿದ್ದರು.
ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ.ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸುದ್ದಿ ಸಮೂಹ ಸಂಸ್ಥೆಗಳ ಅಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ ರವರು ಅಂತರ್ಜಲ ಮರುಪೂರಣದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಕೃಷಿಕರಿಗೆ ನೀಡಿದರು.
ಸೌರಶಕ್ತಿ ವಿದ್ಯುತ್ ಬಳಕೆ ಬಗ್ಗೆ ಮಾಹಿತಿಯನ್ನು ಪುತ್ತೂರು ಉಮೇಶ್ ರೈ ತಿಳಿಸಿದರು.
ಈ ಸಂದರ್ಭದಲ್ಲಿ ವೇಣೂರು ವಿವೇಕಾನಂದ ಸೇವಾ ಟ್ರಸ್ಟ್, ಗ್ರಾಮ ಪಂಚಾಯತ್ ವೇಣೂರು ಮತ್ತು ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಕೃಷಿಕರು ಭಾಗವಹಿಸಿದರು.
ವಕೀಲ ಭರತ್ ಕುಮಾರ್ ಹೆಗ್ಡೆ ಧನ್ಯವಾದವಿತ್ತರು.