ಕೊಕ್ಕಡ: ಸುದೆಗಂಡಿ ಕಪಿಲಾ ನದಿ ಕಿರು ಸೇತುವೆಯ ಜಮೆ-ಖರ್ಚುಗಳ ಸಭೆ

0

ಕೊಕ್ಕಡ: ಸುದೆಗಂಡಿಯಲ್ಲಿರುವ ಕಪಿಲಾನದಿಗೆ 2007ನೇ ಇಸವಿಯಲ್ಲಿ ನಿರ್ಮಾಣವಾದ ಕಿರುಸೇತುವೆಯ ತಡೆಬೇಲಿ ದುರಸ್ತಿ ಕಾರ್ಯ ಇತ್ತೀಚೆಗೆ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ 2 ಹಂತಗಳಲ್ಲಿ ನಡೆದಿದೆ.ತಡೆಬೇಲಿ ಹೊಸತಾಗಿ ನಿರ್ಮಾಣವಾಗಿದೆ.ಕರುಣಾಕರ ಗೋಗಟೆ ಹೊಸ್ಮಠ ಇವರ ನೇತೃತ್ವದಲ್ಲಿ ಆಗ ಸೇತುವೆ ನಿರ್ಮಾಣವಾಗಿತ್ತು.ಇತ್ತೀಚೆಗೆ ದುರಸ್ತಿ ಕೆಲಸವೂ ಅವರ ನೇತೃತ್ವದಲ್ಲಿ ಸೇತುವೆ ದುರಸ್ತಿ ಸಮಿತಿ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ನೆರವೇರಿದೆ.ಅ.8ರಂದು ಕಿರುಸೇತುವೆ ದುರಸ್ತಿ ಕೆಲಸದ ಜಮೆ-ಖರ್ಚುಗಳ ಸಭೆ ನಡೆಯಿತು.2 ಹಂತಗಳಲ್ಲಿ ಆದ ಕೆಲಸದ ಒಟ್ಟು ಜಮೆ 3,77,314.00 ರೂ ಖರ್ಚು ರೂ.3,95,100.00 ಆಗಿರುತ್ತದೆ.ರೂ.17,786.00 ಕೊರತೆಯಿದೆ ಎಂದು ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ಹೆಬ್ಬಾರ್ ನೆಲ್ಲಿತಡ್ಕ ಇವರು ಸಭೆಗೆ ತಿಳಿಸಿದರು.

ಕರುಣಾಕರ ಗೋಗಟೆಯವರು ಮಾತನಾಡಿ ಹೊಸದಾಗಿ ನಿರ್ಮಾಣವಾದ ತಡೆಬೇಲಿಯು ಪಾದಚಾರಿಗಳಿಗೆ, ವಾಹನ ಸವಾರರಿಗೆ ಯಾವುದೇ ಭಯವಿಲ್ಲದೇ ಸಂಚರಿಸಬಹುದಾಗಿದೆ.ಆದರೆ ಇದರ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದರು.

ದುರಸ್ತಿ ಕೆಲಸವನ್ನು ನಿರ್ವಹಿಸಿದ ಮಾಸ್ಟರ್ ಪ್ಲಾನರಿ, ಪುತ್ತೂರು, ಧನಸಂಗ್ರಹ ಮತ್ತು ಧನಸಹಾಯ ಮಾಡಿದ ಎಲ್ಲಾ ಮಹನೀಯರಿಗೆ ಧನ್ಯವಾದವನ್ನು ಸಮರ್ಪಿಸಿದರು.

ಸಭೆಯಲ್ಲಿ ಕರುಣಾಕರ ಗೋಗಟೆ ಹೊಸ್ಮಠ, ವಸುಧಾ ಗೋಗಟೆ, ನರಸಿಂಹ ಪಾಳಂದೆ, ಪ್ರಶಾಂತ್ ಹೆಬ್ಬಾರ್, ಜಗದೀಶ ಖರೆ, ಗೋವಿಂದ ದಾಮ್ಲೆ, ಸೌಮ್ಯ ತುಳುಪುಳೆ, ಹೃಷಿಕೇಶ ಹೆಬ್ಬಾರ್, ಸಚಿನ್ ಹೆಬ್ಬಾರ್, ತೃಪ್ತಿ ತುಳುಪುಳೆ ಹಾಜರಿದ್ದರು.

p>

LEAVE A REPLY

Please enter your comment!
Please enter your name here