ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದ 25 ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ ಅ.4ರಂದು ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಮನ್ಮಹಾರಾಜನಿರಂಜನ ಜಗದ್ಗುರು ಡಾ.ಗುರು ಸಿದ್ದರಾಜ ಯೋಗೀಂದ್ರ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು.
ರಾಜ್ಯಸಭಾ ಸದಸ್ಯರು ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕರು ಮತ್ತು ಗಾಯಕರು ಇಲೈಯರಾಜ, ತಮಿಳುನಾಡಿನ ಸಿದ್ಧಪನ್ ಅಯ್ಯಪ್ಪನ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮಾಣಿಲಾ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಸಾಹಿತಿ ಹಿರೇಮಗಳೂರು ಕಣ್ಣನ್, ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಭಜನಾ ಪರಿಷತ್ ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಪಂಜ, ಪ್ರದೀಪ್ ಕುಮಾರ್ ಕಲ್ಕೂರ, ಟ್ರಸ್ಟಿ ಸಂಪತ್ ಸಾಮ್ರಾಜ್ಯ, ಬೆಂಗಳೂರಿನ ಉದ್ಯಮಿ ಅನಂತರಾಮಯ್ಯ, ಭಜನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಜನಾ ಪರಿಷತ್ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಭಜನಾ ಕಮ್ಮಟದ ಕಾರ್ಯದರ್ಶಿ ಸುರೇಶ ಮೊಯಿಲಿ ವರದಿ ವಾಚಿಸಿದರು.ಧರ್ಮಸ್ಥಳ ಗ್ರಾ.ಪ.ಉಪಾಧ್ಯಕ್ಷ
ಶ್ರೀನಿವಾಸ ರಾವ್ ನಿರೂಪಿಸಿದರು.ವಿದುಷಿ ಕು.ಚೈತ್ರ ಧರ್ಮಸ್ಥಳ ಮತ್ತು ತಂಡದಿಂದ ನೃತ್ಯ ರೂಪಕ ನಡೆಯಿತು.ಕಾರ್ಯಕ್ರಮದ ಮೊದಲು ಭವ್ಯ ಮೆರವಣಿಗೆ ನಡೆಯಿತು.