ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಕೇಂದ್ರದ ಶಿಕ್ಷಣ ಆಯೋಗದಿಂದ ಇತ್ತೀಚೆಗೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಶಿಕ್ಷಕ ಹಾಗೂ ಉಪನ್ಯಾಸಕರಿಗೆ ಮಕ್ಕಳ ಹಕ್ಕುಗಳು ಹಾಗೂ ಸುರಕ್ಷತೆಯ ಬಗ್ಗೆ ಕಾರ್ಯಗಾರವನ್ನು ಹೋಲಿ ರೆಡಿಮೇರ್ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಬೆಳ್ತಂಗಡಿ ವಲಯದ ಅತಿ ವಂ.ಫಾ|ವಾಲ್ಟರ್ ಓಸ್ವಾಲ್ಡ್ ಡಿಮೆಲ್ಲೊ ಕಾರ್ಯಗಾರವನ್ನು ಉದ್ಘಾಟಿಸಿ ಶುಭ ಕೋರಿದರು.
ಮಕ್ಕಳ ಕಲ್ಯಾಣ ಜಿಲ್ಲಾ ಸಮಿತಿ ಇದರ ಅಧ್ಯಕ್ಷ ರೇನಿ ಪೀಟರ್ ಡಿಸೋಜಾ ಹಾಗೂ ಆಪ್ತ ಸಮಾಲೋಚಕಿ ಶೋಭಾ ಜೆಸಿಂತಾ ಡಿಸೋಜಾ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ಮಾಹಿತಿ ನೀಡಿದರು.ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು.ವಿದ್ಯಾ ಸಂಸ್ಥೆಗಳು ಕೇವಲ ಫಲಿತಾಂಶದ ಕಡೆಗೆ ಗಮನಕೊಡದೆ ಮಗುವಿನ ಕಲಿಕಾ ಸಾಮರ್ಥ್ಯ ಹಾಗು ಮಾನಸಿಕ, ಭಾವನಾತ್ಮಕ ಆರೋಗ್ಯದ ಕಡೆಗೆ ಗಮನಹರಿಸಬೇಕು.ಶಿಕ್ಷಣವು ಅಂಕಗಳನ್ನು ದಾಟಿ ವ್ಯಕ್ತಿತ್ವ ನಿರ್ಮಾಣ ಮಾಡುವಂತಿರ ಬೇಕು.ಶಾಲಾ ವಾತಾವರಣವನ್ನು ವಿದ್ಯಾರ್ಥಿ ಸ್ನೇಹಿಯನ್ನಾಗಿ ಪರಿವರ್ತಿಸಬೇಕು. ಮಕ್ಕಳು ಭಯ ಮುಕ್ತ ವಾತಾವರಣದಲ್ಲಿ ಶಿಕ್ಷಣ ಪಡೆಯುವಂತಾಗಬೇಕೆಂದು ಅವರು ಮಾಹಿತಿ ನೀಡಿದರು.
ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಜೆರೊಮ್ ಡಿಸೋಜ ಪ್ರಸ್ತಾವನೆಗೈದು ಸ್ವಾಗತಿಸಿದರು.ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ವಂ|ದೀಪಕ್ ಡೇಸಾ ವಂದಿಸಿದರು.ರಿಚ್ಚರ್ಡ್ ಮೋರಸ್ ಕಾರ್ಯಕ್ರಮ ನಿರೂಪಿಸಿದರು.