ಬೆಳ್ತಂಗಡಿ: ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘ ಬೆಳ್ತಂಗಡಿಯ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಉಪಾಧ್ಯಕ್ಷ ಗಂಗಾಧರ ಮಿತ್ತಮಾರ್ ಅವರು ಅಧ್ಯಕ್ಷತೆಯಲ್ಲಿ ಪ್ರಿಯದರ್ಶಿನಿ ಸಂಘದ ವಠಾರದಲ್ಲಿ ಸೆ.23 ರಂದು ನಡೆಯಿತು.
ಸಂಘವು ವರದಿ ಸಾಲಿನಲ್ಲಿ ರೂ.92.89 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ.43 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸಂಘದ ಉಪಾಧ್ಯಕ್ಷ ಗಂಗಾಧರ್ ಮಿತ್ತಮಾರ್ ಸದಸ್ಯರಿಗೆ ಶೆ.11% ಡಿವಿಡೆಂಟ್ ಘೋಷಿಸಿದ ಅವರು ಸಂಘವು ಅಧ್ಯಕ್ಷ ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ವ್ಯವಹಾರದೊಂದಿಗೆ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ.ಸಂಘವು ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ದೊರಕಿವೆ ಎಂದು ಹೇಳಿದ ಅವರು ಸಂಘವು ನಿಡ್ಲೆಯಲ್ಲಿ ನೂತನ ಶಾಖೆಯನ್ನು ತೆರೆದಿದೆ ಇದು ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ಯಶಸ್ವಿಯಾಗಿದ್ದು ಮುಂಬರುವ ದಿನಗಳಲ್ಲಿ ಸಂಘವುನ್ನು ಬೆಳೆಸಲು ಎಲ್ಲರ ಸಹಕಾರ ಅತ್ಯಗತ್ಯ ಹಾಗೂ ಸಂಘದ ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡಿ ಅವುಗಳನ್ನು ಪರಿಗಣಿಸಿ ಅಂಗೀಕರಿಸಲಾಗುವುದು ಎಂದು ಹೇಳಿದರು.
ನಿರ್ದೇಶಕರಾದ ಉಮೇಶ್ ಎ.ಬಿ, ಬಿ.ಎಂ ಅಬ್ದುಲ್ ಹಮೀದ್, ಬಿ.ರಾಜಶೇಖರ ಅಜ್ರಿ, ಕೆ.ಎಸ್ ಯೋಗೀಶ್ ಕುಮಾರ್, ಕೆ.ರಾಮಚಂದ್ರ ಗೌಡ,ಶೈಲೇಶ್ ಕುಮಾರ್, ವಿ.ರಮೇಶ್ ಪೂಜಾರಿ, ಮೋಹನ್ ಶೆಟ್ಟಿಗಾರ್, ರಾಮಚಂದ್ರ ಭಟ್ ಅರೆಕ್ಕಲ್, ಉಷಾ ಶರತ್, ಜೆಸಿಂತಾ ಮೋನಿಸ್, ರಾಗ್ನೀಶ್, ಅಭಿನಂದನ್ ಹರೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಶ್ಮಿತಾ,ಚೈತ್ರಾ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್ ಸ್ವಾಗತಿಸಿ, ವರದಿ ಮಂಡಿಸಿದರು.ನಿಡ್ಲೆ ಶಾಖೆಯ ಕಾರ್ಯನಿರ್ವಹಣಾಧಿಕಾರಿ ಜನೀಶ್ ಕಾರ್ಯಕ್ರಮ ನಿರೂಪಿಸಿದರು.ಸಂಘದ ಸಿಬ್ಬಂದಿಗಳಾದ ಯುವರಾಜ್, ಸುಷ್ಮಾ ಆರ್, ನಿತ್ಯನಿಧಿ ಸಂಗ್ರಾಹಕರಾದ ಪುನೀತ್, ಚರಣ್ ಕುಮಾರ್ ಪಿ, ಶಾಂತಿ ಮಾರ್ಟಿಸ್, ರಮಾನಂದ, ರಾಜೇಶ್ ಬಿ.ಸಹಕರಿಸಿದರು.