ಗುರುವಾಯನಕೆರೆ: ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಗುರುವಾಯನಕೆರೆ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.24 ರಂದು ಸಂಘದ ಸ್ವಂತ ಕಟ್ಟಡದಲ್ಲಿ ಸಂಘದ ಅಧ್ಯಕ್ಷೆ ಸುಜಿತಾ ವಿ. ಬಂಗೇರ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ ರೂಪಾಯಿ 8 ಲಕ್ಷ ವೆಚ್ಛದಲ್ಲಿ ನಿರ್ಮಿಸಿದ ನೂತನ ಗೋದಾಮು ಕಟ್ಟಡವನ್ನು ಸುಜಿತಾ ವಿ. ಬಂಗೇರ ಉದ್ಘಾಟಿಸಿದರು.ಅವರು ಮಾತನಾಡಿ ಕಳೆದ 34 ವರ್ಷಗಳ ಹಿಂದೆ ಮಹಿಳೆಯರು ಸೇರಿ ಪ್ರಾರಂಭ ಮಾಡಿದ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಗುರುವಾನಕೆರೆ ಮತ್ತು ಮದ್ದಡ್ಕದಲ್ಲಿ ಶಾಖೆಯಲ್ಲಿ ಗ್ರಾಮದ ಪಡಿತರ ವಿತರಣೆ, ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸರಕಾರದ ಆಹಾರ ಒದಗಿಸುವ ಮೂಲಕ ಸಮಾಜಮುಖಿ ಕೆಲಸ ಮಾಡಿದೆ, ಪ್ರಸ್ತುತ ಗುರುವಾಯನಕೆರೆಕೆರೆಯಲ್ಲಿ ಸ್ವಂತ ಕಟ್ಟಡ ಹೊಂದಿ 1300 ಬಿಪಿಎಲ್, ಮತ್ತು ಎಪಿಎಲ್ ಕಾರ್ಡ್ ದಾರರಿಗೆ ಪಡಿತರ ವಿತರಣೆ ವ್ಯವಸ್ಥಿತವಾಗಿ ಮಾಡುತ್ತಿದ್ದು ಗ್ರಾಹಕ ಅನುಕುಲಕ್ಕೆ ಸಂಘದ ಸ್ವಂತ ನಿಧಿಯಿಂದಲೇ ಸುಮಾರು 8 ಲಕ್ಷ ವೆಚ್ಚದ ಗೋದಾಮು ನಿರ್ಮಾಣ ಮಾಡಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷೆ ಮಮತಾ ರಾವ್,ನಿರ್ದೇಶಕರುಗಳಾದ ಶಾಂಭವಿ ಪಿ. ಬಂಗೇರ, ರಾಜಶ್ರೀ ವಿ. ರಮಣ್, ಪ್ರೇಮಾ ಎಂ. ಬಂಗೇರ, ಶಾಂತಾ, ಜಯಮಣಿ, ಫಿಲೋಮಿನಾ, ಜಾನಕಿ, ದಿವ್ಯಜ್ಯೋತಿ, ಆನಂದಿ, ಕೃತಿ ಭಂಡಾರಿ, ಉಮಾವತಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಹನಾ ವಾರ್ಷಿಕ ವರದಿ ಮಂಡಿಸಿದರು.ಅಧ್ಯಕ್ಷೆ ಸುಜಿತಾ ವಿ. ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ನಿರ್ದೇಶಕಿಯರಾದ ಫಿಲೋಮಿನಾ ಮತ್ತು ಕೃತಿ ಪ್ರಾರ್ಥಿಸಿದರು. ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಮಮತಾ ರಾವ್ ವಂದಿಸಿದರು.