ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೆ.22 ರಂದು ಸೋಣಂದೂರಿನಲ್ಲಿ ನಡೆದಿದೆ.
ಸೋಣಂದೂರು ಮುಂಡಾಡಿ ಮನೆ ನಿವಾಸಿಯಾಗಿರುವ ಪ್ರಶಾಂತ್ ಮೃತ ಯುವಕ.
ಪ್ರಶಾಂತ್ ಸೆ.18ರಂದು ರಾತ್ರಿಯ ವೇಳೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.ಕೂಡಲೇ ಮನೆಯವರು ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಘಟನೆಯ ಬಗ್ಗೆ ಮೃತನ ಸಂಬಂಧಿಯಾಗಿರುವ ಪ್ರತೀಕ್ ನೀಡಿರುವ ದೂರಿನಂತೆ ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
p>