ಬೆಳಾಲು: ಮಾಯ ಶಾಲೆಗೆ ಹಳೆ ವಿದ್ಯಾರ್ಥಿಗಳ ತಂಡದಿಂದ ಕಂಪ್ಯೂಟರ್ ಕೊಡುಗೆ

0

ಬೆಳಾಲು: ಇಲ್ಲಿನ ಮಾಯ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಗೆ ನೆಲ್ಕೆತ್ಯಾರು ಭಾಗದ ಹಳೆ ವಿದ್ಯಾರ್ಥಿಗಳಾದ ಹಕೀಮ್, ರಫೀಕ್,ಸಾಹಿದ್ ಮತ್ತು ನಜೀರ್ ಇವರು ಸೆ.21ರಂದು ಶಾಲೆಗೆ ಭೇಟಿ ನೀಡಿ ಒಟ್ಟು 14 ಜನ ಹಳೆ ವಿದ್ಯಾರ್ಥಿಗಳ ತಂಡದ ಆರ್ಥಿಕ ಸಹಕಾರದೊಂದಿಗೆ 40,000 ರೂಪಾಯಿ ಮೌಲ್ಯದ ಉತ್ತಮ ಗುಣಮಟ್ಟದ ಕಂಪ್ಯೂಟರ್ ಅನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಂದ್ರ ಗೌಡ ಸುರುಳಿ ಹಾಗೂ ಮುಖ್ಯ ಶಿಕ್ಷಕ ವಿಠಲ್ ಎಂ.ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಸದಸ್ಯರಾದ ಸತೀಶ್ ಎಳ್ಳುಗದ್ದೆ, ಕೃಷ್ಣಯ್ಯ ಆಚಾರ್ಯ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ, ಇಲಾಖಾ ಅಧಿಕಾರಿಗಳಾದ ಸಿ.ಆರ್.ಪಿ.ಪ್ರತಿಮಾ ಕೆ, ಸೇರಿದಂತೆ ಎಸ್.ಡಿ.ಎಂ.ಸಿ ಸದಸ್ಯರು, ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here