ಕೊಯ್ಯೂರು: ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ರಾಜ್ಯ ಸರ್ಕಾರವು ಶಾಲಾ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ವಾಚಿಸಬೇಕೆಂಬ ಆದೇಶಿಸಿದ ಹಿನ್ನಲೆಯಲ್ಲಿ ಕೊಯ್ಯೂರು ಗ್ರಾಮದ ಭೀಮ್ ರಮಾ ತಂಡದ ವತಿಯಿಂದ ಗ್ರಾಮದ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಅಳವಡಿಸಬಹುದಾದ ಭಾರತ ಸಂವಿಧಾನದ ಪೀಠಿಕೆಯ ಮುದ್ರಿತ ಪ್ರತಿಯನ್ನು ಸೆ.15ರಂದು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.
ಜಗತ್ತಿನ ಅತ್ಯಂತ ದೊಡ್ದ ಪ್ರಜಾಪ್ರಭುತ್ವ ದೇಶವಾದ ನಮ್ಮ ದೇಶದ ಪವಿತ್ರ ಗ್ರಂಥ ಸಂವಿಧಾನದ ಮಹತ್ವದ ಆಶಯವನ್ನು ಎತ್ತಿ ಹಿಡಿಯುವ ಪೀಠಿಕೆಯನ್ನು ಶಾಲಾ, ಕಾಲೇಜುಗಳಲ್ಲಿ ವಾಚಿಸುವಂತೆ ರಾಜ್ಯ ಸರಕಾರ ಆದೇಶಿದೆ.
ಈ ಸಂದರ್ಭ ಸಂವಿಧಾನದ ಆಶಯವನ್ನು ಹಾಗು ಅದರ ಪ್ರಾಮುಖ್ಯತೆಯನ್ನು ಜಾಗೃತಗೊಳಿಸುವ ಉದ್ದೇಶದೊಂದಿಗೆ ಸರಕಾರ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಅರಿವು ಮೂಡಿಸಲಿದೆ ಎಂದು ಸಂವಿಧಾನ ಪೀಠಿಕೆ ಹಸ್ತಾಂತರಿಸಿದ ಭೀಮ್ ರಮಾ ತಂಡದ ಪದಾಧಿಕಾರಿಗಳು ಆಶಯ ವ್ಯಕ್ತಪಡಿಸಿದರು.
ಭೀಮ್ ರಮಾ ತಂಡದ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಸ.ಹಿ.ಪ್ರಾ. ಶಾಲೆ ಬಜಿಲ, ಸ.ಹಿ.ಪ್ರಾ. ಶಾಲೆ ಆದೂರ್ ಪೇರಾಲ್, ಸ.ಪ್ರೌ.ಶಾಲೆ ಕೊಯ್ಯೂರು, ಸ.ಕಿ.ಪ್ರಾ.ಶಾಲೆ ಉಣ್ಣಾಲು, ಸ.ಹಿ.ಪ್ರಾ.ಶಾಲೆ ಕೊಯ್ಯೂರು ದೇವಸ್ಥಾನ, ಸ.ಹಿ.ಪ್ರಾ.ಶಾಲೆ ಮಲೆಬೆಟ್ಟು ಶಾಲೆಗಳಿಗೆ ಭೇಟಿ ನೀಡಿ ಸಂವಿಧಾನ ಪೀಠಿಕೆಯ ಮುದ್ರಿತ ಫಲಕವನ್ನು ಕೊಡುಗೆಯಾಗಿ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ಹಾಗೂ ಸ.ಪ.ಪೂ.ಕಾಲೇಜ್ ಕೊಯ್ಯೂರು, ಸ.ಕಿ.ಪ್ರಾ.ಶಾಲೆ ಉಣ್ಣಲು, ಸ.ಹಿ.ಪ್ರಾ.ಶಾಲೆ ಕೊಯ್ಯೂರು ದೇವಸ್ಥಾನ, ಸ.ಹಿ.ಪ್ರಾ.ಶಾಲೆ ಮಲೆಬೆಟ್ಟುಗೆ ಭೇಟಿ ನೀಡಿ ಸಂವಿಧಾನದ ಪೀಠಿಕೆಯ ಬ್ಯಾನರನ್ನು ಕೊಡುಗೆಯಾಗಿ ನೀಡಿ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಮಹತ್ವ ಹಾಗು ಅದರ ಅನಿವಾರ್ಯತೆಯನ್ನು ಅವರ ಮನದಲ್ಲಿ ಬಿತ್ತಲಾಯಿತು.