ಕನ್ಯಾಡಿಯಲ್ಲಿ 10ನೇ ವರ್ಷದ ಗಣೇಶೋತ್ಸವ-ಮೆಲುಕು ಕಾರ್ಯಕ್ರಮ-ಸೆಲೆಬ್ರಿಟಿಗಳ ಭಾಗಿ-ಸಾಧಕರಿಗೆ ಸನ್ಮಾನ

0

ಧರ್ಮಸ್ಥಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಆಯೋಜನೆ ಮಾಡಿದ್ದ 10 ವರ್ಷದ ಗಣೇಶೋತ್ಸವ ಕನ್ಯಾಡಿ 2 ಶಾಲಾ ವಠಾರದಲ್ಲಿ ಅದ್ಧೂರಿಯಾಗಿ ನಡೆಯಿತು. ಬೆಳಗ್ಗೆ ಮಹಾಗಣಪತಿ ಪ್ರತಿಷ್ಠೆ ಮತ್ತು ಗಣಪತಿ ಹವನದ ಜೊತೆ ದ್ವಜಾರೋಹಣ ಕಾರ್ಯಕ್ರಮ ನೆರವೇರಿತು. ನಂತರ ಓಂಕಾರೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಮಕ್ಕಳಿಗೆ ಗಣಪತಿ ಚಿತ್ರಬಿಡಿಸುವ ಸ್ಪರ್ಧೆ, ಧಾರ್ಮಿಕ ಸಭೆಯ ನಂತರ ಮಹಾ ಪೂಜೆ,ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

ಧಾರ್ಮಿಕ ಸಭೆಯಲ್ಲಿ ಬಹ್ಮಾನಂದ ಸರಸ್ವತಿಯವರಿಂದ ಆಶೀರ್ವಚನ:
10 ವರ್ಷದ ಗಣೇಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮಕ್ಷೇತ್ರ ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ” ಮೂರ್ತಿಯಲ್ಲಿರುವ ವಿಘ್ನೇಶ ನಮ್ಮ ಶರೀರದಲ್ಲಿದ್ದಾನೆ. ಆದರೆ ನಮಗೆ ಗೊತ್ತಿಲ್ಲ. ನಮಗೆ ಸುಖ ಅಂದ್ರೆ ಆನಂದ,ನಗು ನಗುತ್ತಾ ಇರುವುದು ಆನಂದ,ಪರಮಾನಂದ.ಇಡೀ ಜಗತ್ತಿಗೆ ಒಳಿತನ್ನು ಬಯಸುವುದೇ ಧರ್ಮ” ಎಂದರು.

ಸಭಾ ಕಾರ್ಯಕ್ರಮದಲ್ಲಿ ಎನ್ ಜಯಶಂಕರ್ ಶರ್ಮ, ಪ್ರಾದೇಶಿಕ ನಿರ್ದೇಶಕರು, ಎಸ್ ಕೆ ಡಿ ಆರ್ ಡಿ ಪಿ ಧರ್ಮಸ್ಥಳ. ಕುಮಾರಿ ಶ್ರೀಲಕ್ಷ್ಮಿ ಮಠದಮೂಲೆ, ಗೋಪಾಲಕೃಷ್ಣ ಬಿ, ರಾಘವೇಂದ್ರ ಬೈಪಾಡಿತ್ತಾಯ, ನಂದಭಟ್, ಸಿ ಜೆ ಪ್ರಭಾಕರ್, ರಾಜೇಶ್ ಪಿ ಮುಂತಾದವರು ಉಪಸ್ಥಿತರಿದ್ದರು.

ಮೆಲುಕು ಕಾರ್ಯಕ್ರಮದಲ್ಲಿ ನಿವೃತ್ತಿಯಾದ ಗುರುಗಳಿಗೆ ಸನ್ಮಾನ:
ಕನ್ಯಾಡಿ ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ನಿವೃತ್ತರಾದ ಗುರುಗಳ ಸಮಾಗಮ ಕಾರ್ಯಕ್ರಮ ಮೆಲುಕು ವಿಶೇಷವಾಗಿ ನಡೆಯಿತು. ಈ ಸಮಾರಂಭದಲ್ಲಿ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ರೋಹಿತಿ ಅಚ್ಯುತ್ ರವರನ್ನು, ಶಿಕ್ಷಕ ರಮೇಶ್ ಕಾರಂತ್ ಹಾಗೂ ವೀರಣ್ಣರವರನ್ನು ವಿಶೇಷವಾಗಿ ಗುರುತಿಸಿ ಸನ್ಮಾನಿಸಲಾಯಿತು. ಈ ವೇಳೆ ಗುರುಗಳಾದಿಯಾಗಿ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಹಳೆ ವಿದ್ಯಾರ್ಥಿಗಳಲ್ಲಿ ಸಾಧಕ ಕನ್ಯಾಡಿ ಸೇವಾಭಾರತಿಯ ರೂವಾರಿ, ಸೇವಾಧಾಮವನ್ನು ಕಟ್ಟಿ ಅಶಕ್ತರಿಗೆ ಆಸರೆಯಾಗಿರುವ ವಿನಾಯಕ ರಾವ್ ಅಜ್ಜೊಳಿಗೆ ಇವರನ್ನು ಸನ್ಮಾನಿಸಲಾಯಿತು. ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜೇಂದ್ರ ಅಜ್ರಿ ನೆರವೇರಿಸಿದ್ರೆ, ತುಕರಾಮ್ ಸಾಲಿಯಾನ್, ನಂದ ಭಟ್, ಮರಿಯಪ್ಪರವರು ಉಪಸ್ಥಿತರಿದ್ದರು.

ಶ್ರೀರಸ್ತು ಶುಭಮಸ್ತು ಧಾರವಾಹಿ ನಟ ಅಜಿತ್, ಚಿತ್ರನಟ ಜಿನ ಭಾಗಿ:
ಮೆಲುಕು ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳಾದ ಶ್ರೀರಸ್ತು ಶುಭಮಸ್ತು ಧಾರವಾಹಿಯ ಮಾಧವ ಪಾತ್ರಧಾರಿ ಅಜಿತ್ ಹಂದೆ ಮತ್ತು ಕೊರಮ್ಮ ಚಿತ್ರದ ನಟ ಜಿನಪ್ರಸಾಧ್ ಧರ್ಮಸ್ಥಳ ಭಾಗವಹಿಸಿ ಶುಭ ಹಾರೈಸಿದರು. ಇದೇ ವೇಳೆ ಗಜಾನನ 2023 ನೃತ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಪಿಲಿನಲಿಕೆಯ ಜೊತೆ ಶೋಭಾಯಾತ್ರೆ:
ಸಂಜೆ ಕುಣಿತ ಭಜನೆಯ ನಂತರ ಕುಡುಮಶ್ರಿ ಟೈಗರ್ಸ್ ತಂಡದಿಂದ ವಿಶೇಷ ಪಿಲಿನಲಿಕೆ ಕಾರ್ಯಕ್ರಮ ನಡೆಯಿತು. ನಂತರ ಮಹಾಪೂಜೆ ನಡೆದು, ಗಣೇಶ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ನೇತ್ರಾವತಿ ನದಿಯಲ್ಲಿ ಗಣಪತಿಯನ್ನು ವಿಸರ್ಜಿಸಲಾಯಿತು.

p>

LEAVE A REPLY

Please enter your comment!
Please enter your name here