ಗೇರುಕಟ್ಟೆ: ಸೆ.19 ರಂದು ಕಳಿಯ ಗ್ರಾಮದ ಮಂಜಲಡ್ಕದಲ್ಲಿ 51 ನೇ ಶ್ರೀ ಗಣೇಶೋತ್ಸವವು ನೂತನ ಸಭಾಂಗಣದಲ್ಲಿ ಜರುಗಿತು.
ಕುಂಠಿನಿ ರಾಘವೇಂದ್ರ ಬಾಂಗಿಣ್ಣಾಯ ಪೌರೋಹಿತ್ಯದಲ್ಲಿ ವಿಧಿವತ್ತಾಗಿ ಪೂರ್ವಾಹ್ನ ಪುಣ್ಯಾಹ,ಪ್ರಾರ್ಥನೆ ಗಣಹೋಮ ನಡೆಯಿತು.
ಮಧ್ಯಾಹ್ನ ಮಹಾ ಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಊರಿನ ಯಕ್ಷಗಾನ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ, ನಾಳ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ವಿವಿಧ ಸೇವೆ ಪೂಜೆ ಹಾಗೂ ಮಹಾಪೂಜೆ ಮತ್ತು ವೈಭವಯುತ ಶೋಭಾ ಯಾತ್ರೆಯೊಂದಿಗೆ ಶ್ರೀ ಗಣೇಶ ವಿಗ್ರಹ ವಿಸರ್ಜನೆ ನಡೆಯಲಿದೆ.
ಈ ಸಂದರ್ಭದಲ್ಲಿ ಹಿರಿಯರಾದ ಜನಾರ್ದನ ಪೂಜಾರಿ,ಕೂಸಪ್ಪ ಗೌಡ ಹೆಚ್, ಪೂವಪ್ಪ ಭಂಡಾರಿ, ಜಗನ್ನಾಥ ಶೆಟ್ಟಿ, ದೈಹಿಕ ಶಿಕ್ಷಕ ಅಜಿತ್ ಕುಮಾರ್ ಕೆ, ಕಳಿಯ ಬೀಡು ಗುತ್ತು ಸುರೇಂದ್ರ ಕುಮಾರ್ ಜೈನ್, ಸ್ಥಳೀಯರಾದ ತುಕಾರಾಮ ಪೂಜಾರಿ, ಸುರೇಶ್ ಆರ್ ಎನ್, ಕೇಶವ ಬಂಗೇರ ಬಿ., ಸತೀಶ್ ಕುಮಾರ್ ಅರ್.ಎನ್, ದಿವಾಕರ ಎಮ್, ದಯರಾಜ್ ಕೆ.ಪಿ, ಡಾಕಯ್ಯ ಗೌಡ ಹೆಚ್, ವಿಜಯ ಗೌಡ ಕೆ, ವಿಠಲ ಶೆಟ್ಟಿ, ಪದ್ಮನಾಭ ಶೆಟ್ಟಿ, ಯಶೋಧರ ಶೆಟ್ಟಿ ಕೆ, ಸತೀಶ್ ಆಚಾರ್ಯ ಎನ್, ಸುರೇಶ್ ಕುಮಾರ್ ಎಮ್, ಗಣೇಶ್ ಕೆ, ಜಗನಾಥ, ಚಂದ್ರಪ್ರಕಾಶ್ ಕೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಜಿ, ಉಪಾಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ, ಉಮೇಶ್ ಶೆಟ್ಟಿ, ರತ್ನಾಕರ ಪೂಜಾರಿ, ಕರುಣಾಕರ ಶೆಟ್ಟಿ, ನವೀನ್, ಉದಿತ್ ಕುಮಾರ್, ಕಾರ್ಯದರ್ಶಿ ರಂಜನ್, ಜತೆ ಕಾರ್ಯದರ್ಶಿಗಳಾದ ಪುರಂದರ, ಲೋಕೇಶ್ ಕುಮಾರ್ ಎನ್, ರಾಜೇಶ್ ಪಿ, ಸಂಚಾಲಕರಾಗಿ ನಾಣ್ಯಪ್ಪ ಪೂಜಾರಿ, ಸದಾನಂದ ಶೆಟ್ಟಿ, ಪದ್ಮನಾಭ ಶೆಟ್ಟಿ ಕೋಶಾಧಿಕಾರಿ ಯೋಗೀಶ್ ಸುವರ್ಣ, ಲೆಕ್ಕ ಪರಿಶೋಧಕ ಶೇಖರ್ ನಾಯ್ಕ ಹಾಗೂ ಭಕ್ತಾದಿಗಳು ಉಪಸ್ಥತಿರಿದ್ದರು.