ಬೆಳ್ತಂಗಡಿ: ವಕ್ರತುಂಡ ಕಲಾವಿದೆರ್ ಬೆಳ್ತಂಗಡಿ ತಂಡದ ಉದ್ಘಾಟನೆ ಮತ್ತು ಬೇಗ ಬಲ ಬಾಲೆ ತುಳು ನಾಟಕದ ಮುಹೂರ್ತ ಕಾರ್ಯಕ್ರಮವು ಬೆಳ್ತಂಗಡಿಯ ಶ್ರೀಗುರು ರಾಘವೇಂದ್ರ ಮಠ ಲಾಯಿಲದಲ್ಲಿ ನಡೆಯಿತು.
ಎಸ್.ಆರ್.ಆಚಾರ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ತಂಡದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ನಂತರ ತಂಡದ ಬಗ್ಗೆ ಮಾತನಾಡಿದ ಇವರು ತಮ್ಮ ಬಾಲ್ಯದಲ್ಲಿ ನೆನಪುಗಳನ್ನು ಹಂಚಿಕೊಂಡರು ಮತ್ತು ಕಲೆಗಳಿಗೆ ಹಾಗೂ ಕಲಾಭಿಮಾನಿಗಳಿಗೆ ಪ್ರೋತ್ಸಾಹದಾಯಕ ಹಿತನುಡಿ ನುಡಿದರು.
ನಂತರ ಮಾತನಾಡಿದ ರಾಜೇಶ್ ಆಚಾರ್ಯ ಸವಣಾಲು ಇವರು ತಂಡಕ್ಕೆ ಶುಭ ಹಾರೈಸಿದರು.” ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ, ಕೆಲವರಿಗೆ ಮಾತ್ರ ಅದೃಷ್ಟದಂತೆ ಕೈ ಬೀಸಿ ಕರೆಯುತ್ತದೆ” ಮತ್ತು “ಮನರಂಜನೆಯೇ ಧ್ಯೇಯ ಮೂಲ” ಎಂಬ ಸ್ಫೂರ್ತಿದಾಯಕ ಹಿತನುಡಿ ಹಾಗೂ ಕಲೆಗಾರನಿಗೆ ಪ್ರೋತ್ಸಾಹವೇ ಬೆನ್ನೆಲುಬು ಎಂಬ ಆಶಯ ವ್ಯಕ್ತಪಡಿಸಿ, ತನ್ನನ್ನು ರಂಗಭೂಮಿಗೆ ಪರಿಚಯಿಸಿ ನಿರ್ದೇಶನ ಕೊಟ್ಟು ವಿಷ್ಣು ಕಲಾವಿದರು ಮದ್ದಡ್ಕ ತಂಡಕ್ಕೆ ಪರಿಚಯಿಸಿ ರಂಗಭೂಮಿಗೆ ಪರಿಚಯಿಸಿದ ಕೀರ್ತಿ ದಿನೇಶ್.ಎಸ್.ಕಾಪಿಕಾಡ್ ರವರಿಗೆ ಸಲ್ಲಿಸಿದರು.
ವಿಷ್ಣು ಕಲಾವಿದರು ಮದ್ದಡ್ಕ ಇದರ ಮುಖ್ಯಸ್ಥ ಅನಂತ್ ಎಸ್ ಇರ್ವತ್ರಾಯ ದೇವಾನುಗ್ರಹದ ಆಶೀರ್ವಾದದೊಂದಿಗೆ ಹಿತನುಡಿದರು.
ಲೇಖಕರು, ಚಲನಚಿತ್ರ ಮತ್ತು ರಂಗಭೂಮಿ ಕಲಾವಿದ ರಾಜು.ಬಿ.ಎಚ್ ಮಾತನಾಡಿ ತಾಲೂಕಿಗೆ ನಾಟಕ ತಂಡದ ಅವಶ್ಯಕತೆ ಇದ್ದು ಅದನ್ನು ವಕ್ರತುಂಡ ಕಲಾವಿದರು ಯಶಸ್ವಿಯಾಗಿ ನೆರವೇರಿಸಿದ್ದಾರೆ.ನಾಟಕದ ಯಶಸ್ವಿಗೆ ಅಭಿನಯದಲ್ಲಿ ಪರಕಾಯ ಪ್ರವೇಶ ಅತ್ಯವಶ್ಯಕ ಎಂದರು.ಸಮಾಜವನ್ನು ತಿದ್ದುವಂತಹ ನಾಟಕಗಳಿಗೆ ಮಹತ್ವವನ್ನು ನೀಡಿ ಎಂಬ ಆಶಯ ವ್ಯಕ್ತಪಡಿಸಿದರು.”ಶಿಸ್ತಿಗೆ ಪ್ರಾಮುಖ್ಯತೆ ಮತ್ತು ಶಿಸ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ” ಎಂಬ ಸ್ಫೂರ್ತಿದಾಯಕ ಮಾತನ್ನು ಹೇಳಿದರು. ಹಾಗೂ “ಉತ್ತಮ ಬದಲಾವಣೆಯೇ ಅಭಿವೃದ್ಧಿಗೆ ಮೂಲ” ಎಂದರು.
ಬೆಳ್ತಂಗಡಿ ಆಶಾ ಯಂಗ್ ಸ್ಟಾರ್ ಕ್ಲಬ್ ನ ಅಧ್ಯಕ್ಷ ಜಯರಾಮ ಬಂಗೇರ ಹೆರಾಜೆ ಮಾತನಾಡಿ “ಬೆಳ್ತಂಗಡಿಯ ಹಲವಾರು ಕಡೆಗಳಲ್ಲಿ ನಾಟಕ ಅಭಿನಯ ಮತ್ತು ಯಶಸ್ವಿ ಪ್ರದರ್ಶನಕ್ಕೆ ಆಶಾ ಯಂಗ್ ಸ್ಟಾರ್ ಕ್ಲಬ್ ತಂಡ ಸಮಗ್ರ ಪ್ರಶಸ್ತಿಯನ್ನು ಕೂಡ ಪಡೆದುಕೊಂಡ ಹೆಗ್ಗಳಿಕೆ ಇದೆ ಎಂದು ಮಾತನಾಡಿ ಹೊಸ ತಂಡಕ್ಕೆ ಶುಭಹಾರೈಸಿದರು.
ಜಿ.ಪಂ.ಮಾಜಿ ಸದಸ್ಯೆ ಹಾಗೂ ತಾಲೂಕು ಕಾಂಗ್ರೆಸ್ ಗ್ರಾಮೀಣ ಮಹಿಳಾ ಘಟಕದ ಅಧ್ಯಕ್ಷೆ ನಮಿತಾ ಕೆ ತೋಟತ್ತಾಡಿ ಇವರು ಮಾತನಾಡಿ ಮೊದಲನೆಯದಾಗಿ ನಿರ್ದೇಶಕ ದಿನೇಶ್ ಎಸ್ ಕಾಪಿಕಾಡ್ ರವರ ವ್ಯಕಿತ್ವದ ಬಗ್ಗೆ ಅಭಿನಂದಿಸಿದರು.ತನ್ನ ಮಗಳನ್ನು ರಂಗಭೂಮಿ ಕಲಾವಿದೆಯನ್ನಾಗಿ, ಹಾಸ್ಯ ನಟಿ ಹಾಗೂ ನಾಯಕ ನಟಿಯನ್ನಾಗಿ ಮಾಡಿದ ಹೆಗ್ಗಳಿಕೆ ಕೂಡ ಅವರದ್ದೇ ಆಗಿದ್ದೂ ನನ್ನ ಮತ್ತು ದಿನೇಶ್ ಎಸ್ ಕಾಪಿಕಾಡ್ ರವರ ಬಾಂಧವ್ಯವೂ ಸುಮಾರು 10-16 ವರ್ಷ ಎಂದು ತಿಳಿಸಿ, ಹಾಸ್ಯ ಮತ್ತು ಮನೋರಂಜನೆ ನಾಟಕಗಳಿಗೆ ಒತ್ತು ನೀಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಹಾಗೆಯೇ ಹೆಣ್ಣುಮಕ್ಕಳ ನಟನೆಗೆ ಒತ್ತು ನೀಡಿ ಎಂದು ಆಶಿಸಿದರು.
ವಕ್ರತುಂಡ ಕಲಾವಿದೆರ್ ಬೆಳ್ತಂಗಡಿ ಈ ತಂಡದ ಸಾರಥ್ಯವನ್ನು ವಹಿಸಿದ ಕುಮಾರಿ ಅಕ್ಷಿತಾ.ಕೆ ಬಂಗಾಡಿ ಇವರು ವಕ್ರತುಂಡ ನಾಟಕ ತಂಡದ ಸೃಷ್ಟಿಯ ಹಿನ್ನಲೆ ಬಗ್ಗೆ ಮಾತನಾಡಿದರು.ಹೊಸ ಕಲಾವಿದರಿಗೆ ಪ್ರೋತ್ಸಾಹ ಕೊಡಬೇಕು ಹಾಗೂ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ಹಾಗೂ ತಂಡದ ಸಮಗ್ರ ನಿರ್ವಹಣೆ, ರಚನೆ ಹಾಗೂ ನಿರ್ದೇಶಕರಾದ ದಿನೇಶ್ ಎಸ್ ಕಾಪಿಕಾಡ್ ರವರು ನಾಟಕ ಕಲಾ ತಂಡದ ಹಿನ್ನಲೆ ಬಗ್ಗೆ ಮಾತನಾಡಿದರು.ತನ್ನ 5ನೇ ತರಗತಿಯಲ್ಲಿ ಮುಖಕ್ಕೆ ಬಣ್ಣ ಹಚ್ಚಿ ರಂಗಭೂಮಿಗೆ ಪ್ರವೇಶಿಸಿದ್ದು, ತನ್ನ ಕಲಾ ಬದುಕು ಛದ್ಮವೇಷದಿಂದ ಆರಂಭವಾಗಿದೆ ಎಂದರು.ಜಿಲ್ಲಾ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಅನುಭವವನ್ನು ಹಂಚಿಕೊಂಡರು.ಮೊದಲ ಬಾರಿಗೆ ಸರಸ್ವತಿ ಕಲಾ ಬಳಗ ಮದ್ದಡ್ಕ ತಂಡದಲ್ಲಿ ರಂಗಭೂಮಿಗೆ ಪ್ರವೇಶಿಸಿ, ಹಿರಿಯ ಕಲಾವಿದರೊಂದಿಗೆ ರಂಗಮಂದಿರವನ್ನು ಹಂಚಿಕೊಂಡ ಸುಮಧುರವಾದ ಅನುಭವವನ್ನು ಹಂಚಿಕೊಂಡರು.ಕಲಾ ತಂಡದ ಹಿಂದಿರುವ ಪರಿಶ್ರಮದ ಬಗ್ಗೆ ವಿವರಿಸಿದರು.ಆರ್ಥಿಕವಾಗಿ ಸದೃಢವಿಲ್ಲದಿದ್ದರೂ ಧೈರ್ಯದ ಮುನ್ನಡೆಯಿಟ್ಟು ಯಶಸ್ವಿಯಾಗಿ ನಾಟಕ ತಂಡವನ್ನು ರಚಿಸಿದ ಹಿನ್ನೆಲೆಯ ಬಗ್ಗೆ ವಿವರಿಸಿದರು. ಸಾಮಾಜಿಕ, ಸಾಂಸಾರಿಕ ಜಂಜಾಟದ ನಡುವೆ ಕಲಾ ಬದುಕಿಗೆ ಮಹತ್ವ ಕೊಟ್ಟು ಯಶಸ್ವಿಯಾಗಿ ಹಲವಾರು ಬಾರಿ ನಾಟಕ ರಚಿಸಿ, ಒಗ್ಗಟ್ಟು ಮತ್ತು ಹೊಂದಾಣಿಕೆಯ ಕಲಾ ಬದುಕಿಗೆ ಮಹತ್ವ ನೀಡಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಈ ಸಮಾರಂಭವನ್ನು ಗಣೇಶ್ ಆಚಾರ್ಯ ಕುಂಟಿನಿ ಇವರು ಸ್ವಾಗತಿಸಿ, ನಾಗೇಶ್ ರೈ ಕಾವಲ್ ಕಟ್ಟೆ ಇವರು ಧನ್ಯವಾದದೊಂದಿಗೆ ರಂಗಭೂಮಿಯಲ್ಲಿ ಒಂದು ಹೆಣ್ಣು ಮಗಳು ಅತೀ ಸಣ್ಣ ವಯಸ್ಸಿನಲ್ಲಿ ಒಂದು ಕಲಾ ತಂಡದ ನಿರ್ಮಾಣವನ್ನು ಕೈಗೆತ್ತಿಕೊಂಡ ಹೆಗ್ಗಳಿಕೆಯನ್ನು ವ್ಯಕ್ತಪಡಿಸಿದರು ಹಾಗೂ ಇನ್ನು ಮುಂದಕ್ಕೆ ಇವರ ಕಲಾ ಜೀವನ ಸುಮಧುರವಾಗಿ ಮೂಡಿಬರಲಿ ಎಂದು ಆಶಿಸಿದರು.ಸುಶ್ಮಿತಾ ಪದ್ಮುಂಜ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ತಂಡಕ್ಕೆ ಉದಯ್ ಎ.ಕೆ, ವಿ ಸ್ಕೂಲ್ ಆಫ್ ಡ್ಯಾನ್ಸ್ ಇವರ ನೃತ್ಯ ಸಂಯೋಜನೆ ಇದ್ದು, ಶೇಖರ್ ಕೊಜಪಾಡಿ ಅವರ ಸಂಚಾಲಕತ್ವ ಇದ್ದು, ಗಣೇಶ್ ಆಚಾರ್ಯ ಕುಂಟಿನಿ ಇವರ ನಿರ್ವಹಣೆಯಲ್ಲಿ, ನಾಗೇಶ್ ರೈ ಕಾವಲ್ ಕಟ್ಟೆ ಇವರ ಸಲಹೆ ಸಹಕಾರದೊಂದಿಗೆ, ಸುರೇಶ್ ನಾರಾವಿ ಅವರ ಸಂಪೂರ್ಣ ಸಹಕಾರವಿದ್ದು, ವಿನೋದ್ ಆಳ್ವ ಸವಣಾಲು ಮತ್ತು ಪ್ರಕಾಶ್ ಸವಣಾಲು ಇವರ ಹಿನ್ನಲೆ ಸಹಕಾರದೊಂದಿಗೆ, ಶ್ರೀ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದದೊಂದಿಗೆ ವಕ್ರತುಂಡ ಕಲಾವಿದೆರ್ ಬೆಳ್ತಂಗಡಿ ಇವರ ನಾಟಕ ತಂಡದ ಉದ್ಘಾಟನೆಯು ನಿರ್ವಿಘ್ನವಾಗಿ ಮೂಡಿ ಬಂತು.
ನಂತರ ರಾಜು ಬಿ ಎಚ್ ರವರು ಎಲ್ಲರಿಗೂ ಸ್ವಾಗತಿಸಿದರು