ಬೆಳ್ತಂಗಡಿ: ಟೈಲರ್ಸ್ ಸಹಕಾರ ಸಂಘದ ಮಹಾಸಭೆ- ಶೇ.15 ಡಿವಿಡೆಂಟ್ ಘೋಷಣೆ

0

ಬೆಳ್ತಂಗಡಿ: ಬೆಳ್ತಂಗಡಿ ಟೈಲರ್ಸ್ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.16 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘದ ಉಪಾಧ್ಯಕ್ಷ ಕೆ ಕುಶಾಲಪ್ಪ ಗೌಡ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವನಾಧಿಕಾರಿ ರೋಲ್ಸನ್ ಜೋಯಲ್ ಮೊರಾಸ್ ವಾರ್ಷಿಕ ವರದಿ ಲೆಕ್ಕ ಪತ್ರ ಮಂಡಿಸಿದರು
ಸದಸ್ಯರಿಗೆ ಶೇಕಡ 15 ಡಿವಿಡೆಂಡ್ ಗೋಷಣೆ ಮಾಡಲಾಯಿತು.

ಹಿರಿಯ ಟೈಲರ್ ಸದಸ್ಯರುಗಳಾದ ಎನ್ ವಸಂತ್, ಅಬ್ದುಲ್ ಸತ್ತಾರ್, ಜಯ ಕುಮಾರ್, ನವೀನ್ ಎ ಪೂಜಾರಿ, ಇಸಿದೋರು ಮಾಡ್ತಾ, ರತ್ನಾಕರ ಹೆಗ್ಡೆ, ಶಿವ ರಾಮ ಹೆಗಡೆ ಇವರನ್ನು ಸನ್ಮಾನ ಮಾಡಲಾಯಿತು.ಪಿಯುಸಿ ಹಾಗೂ ಅದಕ್ಕಿಂತ ಮೇಲ್ಪಟ್ಟ ವಿದ್ಯಾಭ್ಯಾಸ ಮಾಡುತ್ತಿರುವ ಸಂಘದ 22 ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.

ಸಂಘದ ಪಿಗ್ಮಿ ಸಂಗ್ರಹಕರಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಿರ್ದೇಶಕರಾದ ಪಾರ್ವತಿ ವಂದಿಸಿದರು.ನಿರ್ದೇಶಕರಾದ ಎನ್. ವಸಂತ್, ಸದಾನಂದ ಶೆಟ್ಟಿ, ವಲೇರಿಯನ್ ಪಯಾಸ್, ವಸಂತ ಪೂಜಾರಿ, ರಾಜು ಪೂಜಾರಿ, ಜೋಸೆಫ್ ಡಿಸೋಜ, ಶಶಿಕಲಾ, ಉಷಾ ಉಪಸ್ಥಿತರಿದ್ದರು.ನಿರ್ದೇಶಕಿ ಶ್ರೀಮತಿ ಶಾಂಭವಿ ಪಿ. ಬಂಗೇರ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here