ಮುಂಡಾಜೆ: ಮನೆಯಲ್ಲಿಟ್ಟಿದ್ದ 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು-ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

0

ಮುಂಡಾಜೆ: ಮುಂಡಾಜೆ ನಿವಾಸಿ ಪ್ರಮೋದ್ ವಿ.ಭಿಡೆ ಎಂಬವರ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು ಆದ ಬಗ್ಗೆ ಸೆ.12 ರಂದು ನೀಡದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮೋದ್ ವಿ ಬಿಡೆ ಜು.5ರಂದು ಮನೆಯ ಸಾರಣೆ ಹಾಗೂ ಪೈಂಟಿಗ್ ಕೆಲಸವನ್ನು ಪ್ರಾರಂಭಿಸಿದ್ದು, ಕೆಲಸ ಪ್ರಾರಂಭ ಮಾಡುವ ಮುಂಚಿತವಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅವರ ಪತ್ನಿ ಮನೆಯ ನೆಲಮಾಳಿಗೆಯಲ್ಲಿ ಇಟ್ಟಿದ್ದರು.

ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣಗಳ ಕೋಣೆಗೆ ಬೀಗ ಹಾಕದೆ ಇದ್ದು ಮನೆಯ ಕೆಲಸಕ್ಕೆ ಸುಮಾರು 10 ರಿಂದ 13 ಜನ ಕೆಲಸಕ್ಕೆಂದು ಬಂದಿರುತ್ತಾರೆ.ಕೆಲಸ ಮುಗಿಸಿ ಜುಲೈ 19 ರಂದು ತೆರಳಿರುತ್ತಾರೆ.

ಸೆ.12ರಂದು ಬೆಳಗ್ಗೆ ಪ್ರಮೋದ್ ಬಿಡೆ ಹಾಗೂ ಅವರ ಪತ್ನಿ ಕಾರ್ಯಕ್ರಮಕ್ಕಾಗಿ ಆಭರಣ ಧರಿಸಿಕೊಳ್ಳಲು ಆಭರಣ ಇಟ್ಟಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ, ಅಲ್ಲಿ ಇಡಲಾಗಿದ್ದ ಒಟ್ಟು 122 ಗ್ರಾಂ ಚಿನ್ನಾಭರಣಗಳು ಕಳವಾಗಿರುವುದು ಕಂಡು ಬಂದಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 5 ಲಕ್ಷ ರೂಪಾಯಿಯಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here