ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸೇಕ್ರೆಡ್ ಹಾರ್ಟ್ ಕೋಂಗ್ರಿಗೆಷನ್ ಸಿಸ್ಟೆರ್ ಟೆಸಿ ಮಾನುವೆಲ್ ಇವರ 2023-24ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಸೆ.09ದಂದು ಅನುದಾನಿತ ಶಾಲೆಗಳ ಕೇಂದ್ರ ಕಛೇರಿ ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಗಾರ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತ ಸಿಸ್ಟೆರ್ ಟೆಸಿ ಇವರನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಪರಮ ಪೂಜ್ಯ ಅತಿ ವಂದನಿಯ ಬಿಷಪ್ ಲಾರೆನ್ಸ್ ಮುಕ್ಕುಯಿ, ಕರ್ನಾಟಕ ಕ್ಯಾಥೋಲಿಕ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಸೊಸೈಟಿ ಯ ಕಾರ್ಯದರ್ಶಿ ನೆಲ್ಯಾಡಿ ಅಲ್ಫೋನ್ಸ ಪುಣ್ಯ ಕ್ಷೇತ್ರ ದ ವಂದನಿಯ ಫಾ.ಶಾಜಿ ಮಾತ್ಯು ಸೇಕ್ರೆಡ್ ಹಾರ್ಟ್ ಕೊಂಗ್ರಿಗೇಷನ್ ಇದರ ರೀಜಿನಲ್ ಸುಪಿರಿಯರ್ ವಂದನಿಯ ಸಿಸ್ಟೆರ್ ಲಿಸ್ ಮಾತ್ಯು, ಮುಖ್ಯ ಕೌನ್ಸಿಲ್ ಸದಸ್ಯರಾದ ವಂದನಿಯ ಸಿಸ್ಟೆರ್ ತೆರೆಸ್ ಕುರಿಯನ್,ವಂದನಿಯ ಸಿಸ್ಟೆರ್ ಸೌಮ್ಯ, ವಂದನಿಯ ಸಿಸ್ಟೆರ್ ಎಲ್ಸಿಲಿಟ್ ವಾಯಕ್ಕಾಲ ಸಾಧನೆಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.ಇವರು ಬೆಳ್ತಂಗಡಿ ತಾಲೂಕಿನ ತೋಟತ್ತಾಡಿಯ ಇಮ್ಮಾ ನುವೆಲ್ ಮತ್ತು ತ್ರೆಸಿಯಮ್ಮ ಇವರ ಸುಪುತ್ರಿಯಾಗಿದ್ದು ಕೊಡಗಿನ ಹೊಸಕೋಟೆ ದೀಪ್ತಿ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆಯಲ್ಲಿದ್ದಾರೆ.