ಉಜಿರೆ: ಕೇವಲ ಪಠ್ಯಗಳೊಂದಿಗಿನ ಕಲಿಕೆ ಜೀವನದ ಪಥದಲ್ಲಿ ಪೂರ್ಣ ಫಲ ನೀಡಲಾರದು.ಹಾಗಾಗಿ ಕಲಿಕೆಯೊಂದಿಗೆ ಬದುಕಿನ ಪಾಠಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು.ವಿದ್ಯಾರ್ಥಿ ದೆಸೆಯಲ್ಲಿ ಆತ್ಮವಿಶ್ವಾಸ, ಏನೇ ಬಂದರೂ ಎದುರಿಸುವ ಧೈರ್ಯ, ಉತ್ತಮ ಸಂವಹನ ಕಲೆ ಕರಗತಗೊಳ್ಳಬೇಕು.ಪಲಾಯನವಾದಿಗಳಾಗದೆ ಎಲ್ಲವನ್ನು ಕುತೂಹಲದಿಂದ ಗ್ರಹಿಸುವ, ಕಾಣುವ, ಕಲಿಯುವ ಹಂಬಲ ರೂಡಿಸಿಕೊಳ್ಳಬೇಕು, ಹಾಗಾದಾಗ ಭವಿಷ್ಯದಲ್ಲಿ ಬದುಕ ಕಟ್ಟುವ ಕ್ರಮ ಕ್ಲಿಷ್ಟವಾಗದುಯೆಂದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ‘ಮಾನವಸಂಪನ್ಮೂಲ ಹಾಗೂ ವೃತ್ತಿ ಮಾರ್ಗದರ್ಶನ’ ತಂಡದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್.ಜಿ ಭಟ್ ಅವರು ಮಾತನಾಡುತ್ತ, ಉದಾಹರಣೆ ಹಾಗೂ ವಿಭಿನ್ನ ಆಟಗಳ ಮೂಲಕ ವಿದ್ಯಾರ್ಥಿಗಳಿಗೆ ಜೀವನ ಕಲೆ ವೃದ್ಧಿ ಬಗ್ಗೆ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಉಪಸ್ಥಿತರಿದ್ದರು.ಹಾಗೂ ರಾಸಾಯನ ಶಾಸ್ತ್ರದ ಉಪನ್ಯಾಸಕಿ ಚೈತ್ರ ನಿರೂಪಿಸಿದರು.ಗಣಿತಶಾಸ್ತ್ರ ಉಪನ್ಯಾಸಕ ಕೃಷ್ಣಪ್ರಸಾದ್ ವಂದಿಸಿದರು.