ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು ಶಾಲೆಯಲ್ಲಿ ಬರೀ ಶಿಕ್ಷಣಕ್ಕೆ ಮಾತ್ರ ಮಹತ್ವವನ್ನು ನೀಡುವುದಲ್ಲದೆ, ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದು, ಪ್ರತಿ ವಾರದಲ್ಲಿ ಒಂದು ದಿನ ಕರಾಟೆ, ಯೋಗಾಸನ ಸಂಗೀತ, ಡ್ಯಾನ್ಸ್, ಯಕ್ಷಗಾನ ತರಬೇತಿಗಳನ್ನು ನುರಿತ ತರಬೇತುದಾರರಿಂದ ನೀಡಲಾಗುತ್ತಿದೆ.
ಶಾಲಾ ಸಂಸ್ಥಾಪಕ ಗಿರೀಶ್ ಕೆ ಹೆಚ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವಿತ್ ಕುಲಾಲ್ ರವರ ಮಾರ್ಗದರ್ಶನದಲ್ಲಿ ವಿಜ್ಞಾನ, ಪರಿಸರ, ಸಾಂಸ್ಕೃತಿಕ, ಗಣಿತ, ಎನ್ ಸಿ ಸಿ, ಸೇವಾದಳ ಹಲವಾರು ವಿಭಾಗಗಳಾಗಿ ವಿಂಗಡಿಸಲಾಯಿತು.
ಆಯಾಯ ವಿಭಾಗಗಳಿಗೆ ನಾಯಕರನ್ನು ಆಯ್ಕೆ ಮಾಡಿ, ಗುಂಪಿನ ಹೆಸರನ್ನು ಚಾರ್ಟಿನ ಮೂಲಕ ಎಲ್ಲಾ ವಿದ್ಯಾರ್ಥಿಗಳ ಸಹಕಾರದಿಂದ ಉದ್ಘಾಟಿಸಲಾಯಿತು. ರೀತಿಯಲ್ಲಿ ಅಲಂಕಾರಗೊಳಿಸಿ ಉದ್ಘಾಟಿಸಲಾಯಿತು.ವಿಭಾಗವಾರು ಶಿಕ್ಷಕರಾದಂತಹ ಗಣಿತ – ಶ್ವೇತ ಮತ್ತು ಸಂಧ್ಯಾ, ವಿಜ್ಞಾನ- ವಿನಯ್ ಮತ್ತು ಸ್ವಾತಿ, ಎನ್ ಸಿ ಸಿ – ಸಂಗೀತ ಮತ್ತು ಮಧು ಸರ್, ಸೇವಾದಳ – ಶುಭ ಮತ್ತು ಪವಿತ್ರ, ಪರಿಸರ- ಸ್ವರ್ಣ ಲತಾ ಮತ್ತು ರೂಪ ಲತಾ, ಸಾಂಸ್ಕೃತಿಕ- ಸಪ್ನಾಜ್ ಮತ್ತು ವೀಣಾ ಇವರು ಮಕ್ಕಳಿಗೆ ಪ್ರೋತ್ಸಾಹಿಸಿದರು.