ಉಜಿರೆ: ಉಜಿರೆಯ ಸಾನಿಧ್ಯ ಎಂಡೋ ಸಂತ್ರಸ್ತರ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಆ.29ರಂದು ಓಣಂ ಸಂಭ್ರಮ ಆಚರಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಸಾನಿಧ್ಯದ ವಿಶೇಷ ಚೇತನ ಮಕ್ಕಳೊಂದಿಗೆ ಓಣಂ ಹಬ್ಬ ಆಚರಿಸಲು ಸಂತೋಷವಾಗುತ್ತಿದೆ.ಸಂಸ್ಥೆಯ ಬೇಡಿಕೆಯ ಆಟದ ಮೈದಾನ ಹಾಗೂ ಉದ್ಯಾನವನವನ್ನು ಗ್ರಾಮ ಪಚಾಯತ್ ವತಿಯಿಂದ ನಿರ್ಮಿಸಿಕೊಡಲಾಗುವುದು.ತಮ್ಮ ಸ್ವಂತ ಕೊಡುಗೆಯಾಗಿ ಸಂಸ್ಥೆಗೆ ವೀಲ್ ಚೇರ್ ನೀಡುವುದಾಗಿ ಅವರು ತಿಳಿಸಿದರು.
ಉಜಿರೆಯ ವರ್ತಕರು ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೇವರ ಸಮಾನರಾಗಿರುವ ಮುಗ್ಧ ಮಕ್ಕಳ ಓಣಂ ಹಬ್ಬದಾಚರಣೆಯಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ ಎಂದರು.ವರ್ತಕರು ಹಾಗೂ ಕೈಗಾರಿಕಾ ಸಂಘದ ಕಾರ್ಯದರ್ಶಿ ಪ್ರಸಾದ್ ಕೆ.ಎಸ್ ಮುಗ್ಧ ಮಕ್ಕಳಲ್ಲಿ ಚೈತನ್ಯ ತುಂಬಿ ಅವರ ಮುಖದಲ್ಲಿ ನಗು ತರಿಸುವ ಸಾನಿಧ್ಯದ ಕೆಲಸ ಅಸಾಧಾರಣವಾದುದು ಎಂದು ನುಡಿದು ಅಭಿನಂದಿಸಿದರು.
ಸಾನಿಧ್ಯದ ಗೌರವ ಸಲಹೆಗಾರ ಡಾ!ಪ್ರಮೋದ್ ಆರ್.ನಾಯಕ್ ಅವರು ಸಾನಿಧ್ಯದ ಆಡಳಿತ ನಿರ್ವಹಿಸುತ್ತಿರುವ ಮಂಗಳೂರಿನ ಶ್ರೀ ಗಣೇಶ್ ಸೇವಾ ಪಟಿಸ್ಟಾನದಲ್ಲಿ 16೦ಕ್ಕೂ ಹೆಚ್ಚು ಎಲ್ಲಾ ವಯೋಮಾನದ ವಿಶೇಷ ಚೇತನರಿಗೆ ಶಿಕ್ಷಣ ನೀಡುತ್ತಿದ್ದು ಡಾ!ವಸಂತ ಕುಮಾರ್ ಶೆಟ್ಟಿ ನಡೆಸಿಕೊಂಡು ಬರುತ್ತಿದ್ದಾರೆ.ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಕೇರಳದಲ್ಲಿ ಎಲ್ಲ ಸಮಾಜ ಬಾಂಧವರು ಆಚರಿಸುವ ದೋಣಿ ಹಬ್ಬ, ಸಮವಸ್ತ್ರ ಧರಿಸಿ ಆಚರಿಸುವ ಓಣಂ ಹಬ್ಬವಿಶಿಷ್ಟವಾದುದು ಎಂದು ನುಡಿದು ಸಾನಿಧ್ಯದಲ್ಲೂ ಮಕ್ಕಳಿಗೆ ಸಂತೋಷ ನೀಡಲು ಹಬ್ಬ ಆಚರಿಸುತ್ತಿರುವುದಾಗಿ ತಿಳಿಸಿದರು.
ಶಿಕ್ಷಕಿಯರಿಂದ ಸಾಂಸ್ಕೃತಿಕ ನೃತ್ಯ, ವಿದ್ಯಾರ್ಥಿಗಳಿಂದ ಡಾನ್ಸ್ ನಡೆಯಿತು.ಪಿಸಿಯೋಥೆರಪಿಸ್ಟ್ ರುಬೀನಾ ಕಾರ್ಯಕ್ರಮ ನಿರೂಪಸಿ, ನಿರ್ದೇಶಕಿ ಮಲ್ಲಿಕಾ ಸ್ವಾಗತಿಸಿ, ಶಿಕ್ಷಕಿ ಗೀತಾ ವಂದಿಸಿದರು.