ನಾವೂರು: ಮುಹಿಯುದ್ದೀನ್ ಜುಮ್ಮಾ ಮಸೀದಿ ಮುರ ನಾವೂರು ಇದರ 2023 ನೇ ಸಾಲಿನ ಮೀಲಾದ್ ಸ್ವಾಗತ ಸಮಿತಿ ರಚನಾ ಸಭೆಯು ಎಂ.ಜೆ.ಎಂ ಮುರ ಅಧ್ಯಕ್ಷ ಹಸೈನಾರ್ ಎನ್. ಕೆ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮುರ ಸಭಾಂಗಣದಲ್ಲಿ ನಡೆಯಿತು.
ಸ್ಥಳೀಯ ಖತೀಬ್ ಬಶೀರ್ ಸಅದಿ ದುಆ ನೆರವೇರಿಸಿದರು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ನಾವೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ ನೂತನ ಮಿಲಾದ್ ಸ್ವಾಗತ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಇಸ್ಮಾಯಿಲ್ ಸಿ.ಎಂ, ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಮೆರ್ಲ, ಕೋಶಾಧಿಕಾರಿಯಾಗಿ ಸಾದಿಕ್ ಮೆರ್ಲ, ಉಪಾಧ್ಯಕ್ಷರಾಗಿ ನೌಷಾದ್ ಕೈಕಂಬ, ಜೊತೆ ಕಾರ್ಯದರ್ಶಿಗಳಾಗಿ ಅಸಿಫ್ ಮುರ, ಉಮೈರ್ ಎನ್. ಎ ಮತ್ತು 25 ಮಂದಿಯನ್ನು ಸ್ವಾಗತ ಸಮಿತಿಯ ಸದಸ್ಯರಾಗಿ ಆಯ್ಕೆಮಾಡಲಾಯಿತು.
ಮೀಲಾದ್ ಕಾರ್ಯಕ್ರಮ, ರ್ಯಾಲಿ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಮಸೀದಿ ಸುತ್ತ ಮುತ್ತ ಅಲಂಕಾರ, ಫ್ಲೆಕ್ಸ್ ಬಂಟಿಂಗ್ಸ್ ಅಳವಡಿಕೆ, ಕಾರ್ಯಕ್ರಮದ ಖರ್ಚು ವೆಚ್ಚಗಳಿಗೆ ಫಂಡ್ ಸಂಗ್ರಹ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ನೂರುಲ್ ಹುದಾ ಮದರಸ ಮುರ ಇಲ್ಲಿನ ಸದರ್ ಉಸ್ತಾದ್ ಹನೀಫ್ ಕಾಮಿಲ್ ಸಖಾಫಿ, ಖತೀಬ್ ಬಶೀರ್ ಸಅದಿ ಯವರು ಉಪದೇಶ ನೀಡಿ ಪ್ರೋತ್ಸಾಹ ನೀಡಿದರು.
ಸಭೆಯಲ್ಲಿ ಮುಹಿಯುದ್ದಿನ್ ಜುಮಾ ಮಸೀದಿ ಆಡಳಿತ ಕಮಿಟಿ ಉಪಾಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್, ಮಾಜಿ ಅಧ್ಯಕ್ಷ ಪಿಯು ಅಲಿಕುಂಜಿ ಸಖಾಫಿ, ಕಾರ್ಯದರ್ಶಿ ಸುಲೈಮಾನ್ ಪಿ.ವೈ ಕೋಶಾಧಿಕಾರಿ ಇಬ್ರಾಹಿಂ ಎನ್ ಎ, ಸದಸ್ಯರಾದ ಇಸ್ಮಾಯಿಲ್ ಗಂಪ, ಇಬ್ರಾಹಿಂ ಕೋಡಿ ಕಣ್ಣಾಜೆ, ಮುಹಮ್ಮದ್ ಮುರ, ಅಬ್ದುರಹ್ಮಾನ್ ಮುಸ್ಲಿಯಾರ್, ಬಶೀರ್ ಪಿವೈ ಮುಂತಾದವರು ಉಪಸ್ಥಿತರಿದ್ದರು.
ಮೀಲಾದ್ ಕಮಿಟಿ ಕೋಶಾಧಿಕಾರಿ ಸ್ವಾದಿಕ್ ನಾವೂರು ಧನ್ಯವಾದ ಸಮರ್ಪಿಸಿದರು.