ನಾರಾವಿ: ನಾರಾವಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ಆ.28ರಂದು ಸಂಘದ ಅಧ್ಯಕ್ಷ ದಯಾನಂದ ಕೋಟ್ಯಾನ್ ಅದ್ಯಕ್ಷತೆಯಲ್ಲಿ ನಡೆಯಿತು.
ಉಪಾಧ್ಯಕ್ಷರಾದ ಭಾಸ್ಕರ್ ಹೆಗ್ಡೆ, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಉಪಾಧ್ಯಕ್ಷೆ ಸುಮಿತ್ರ, ಮರೋಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭರಾಜ್ ಹೆಗ್ಡೆ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಶಶಿಕಾಂತ್ ಜೈನ್, ಎಸ್.ಡಿ.ಸಿ.ಸಿ ಬ್ಯಾಂಕ್ ನಾರಾವಿ ಶಾಖಾ ವ್ಯವಸ್ಥಾಪಕ ಸುದರ್ಶನ್, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸುಚಿತ್ರಾರವರು ಸಂಘದ ಬಗ್ಗೆ ಮಾಹಿತಿ ಸಲಹೆ ಸೂಚನೆಗಳನ್ನು ನೀಡಿದರು.
ಪಶು ವೈದ್ಯಾಧಿಕಾರಿ ಡಾ.ಪೂಜಾ ಪಶುಗಳ ಪೋಷಣೆ, ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ, ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಶೇಖರ ಹೆಗ್ಡೆ, ಸಿಪ್ರಿಯನ್ ಪಿರೇರಾ, ಮೆಲ್ವಿನ್ ಡಿಸೋಜ,ಸುಚೇಂದ್ರ ಜೈನ್, ರಾಘವ ಹೆಗ್ಡೆ, ಸುರೇಖಾ, ವಿನೋದ, ಸುನಿಲ್ ಡಿಸೋಜ, ವಿನಯ್ ಲೋಬೊ, ವಿಠಲ ಮಲೆಕುಡಿಯ, ಕಿಟ್ಟು ಮಂಜುನಗರ ಉಪಸ್ಥಿತರಿದ್ದರು.
ನಿರ್ದೇಶಕ ಭಾಸ್ಕರ್ ಹೆಗ್ಡೆ ಸ್ವಾಗತಿಸಿ, ಕಾರ್ಯದರ್ಶಿ ಕೆ.ಹರಿಪ್ರಸಾದ್ ರೈ ವರದಿ, ಲೆಕ್ಕ ಪತ್ರ ಮಂಡಿಸಿದರು.ಕಾರ್ಯಕ್ರಮವನ್ನು ಸುನಿಲ್ ಡಿಸೋಜ ನಿರೂಪಿಸಿದರು.ನಿರ್ದೇಶಕ ಶೇಖರ ಹೆಗ್ಡೆ ವಂದಿಸಿದರು.
ಸಿಬ್ಬಂದಿಗಳಾದ ಸುಕೇಶ್, ರಂಜಿತ್ ಸಹಕರಿಸಿದರು.ಸದಸ್ಯರು ಉಪಸ್ಥಿತರಿದ್ದರು.
ಸಂಘದ ಅಭಿವೃದ್ಧಿ ಬಗ್ಗೆ ಸಂಘದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.ಸಂಘದ ಸದಸ್ಯರ ಮಕ್ಕಳು ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಗಜೆರಾ ಹಾರ್ವಿ , ಪ್ರತೀಕ್ಷಾ, ಅಜಯ್, ಅಕ್ಷಯ್, ನಿರೀಕ್ಷ, ಶ್ರೇಯಸ್ ಅರುಣ್, ಜ್ಯೋಯ್ಸಿಲ್ ಡಿಸೋಜ, ಶ್ರಾವ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.ಅತೀ ಹೆಚ್ಚು ಹಾಲು ಪೂರೈಸಿದ ಅಜಿತ್ ಕುಮಾರ್ ಜೈನ್ , ಅರುಣ್ ಪ್ರಕಾಶ್ ಡಿಸೋಜ, ಪ್ರೇಮಾ ದೇವಾಡಿಗ, ಲಿಯೋ ಪಾಯ್ಸ್, ವಸಂತ, ಮೆಲ್ವಿನ್ ಡಿಸೋಜ ಇವರನ್ನು ಗೌರವಿಸಲಾಯಿತು.ಹಾಗೂ ಸದಸ್ಯರಿಗೆ 65% ಬೋನಸ್, ಡಿವಿಡೆಂಡ್ 25% ಘೋಷಿಸಲಾಯಿತು.